ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವೀರಶೈವ ಧರ್ಮ ಒಂದು ಜಾತಿಯಲ್ಲ

Vishwanath S
Updated On : 22 Jan 2014, 2:36 am

ನರೇಗಲ್ಲ: ವೀರಶೈವ ಧರ್ಮ ಒಂದು ಜಾತಿಯಲ್ಲ, ಅದೊಂದು ಮಹಾನ ಧರ್ಮ. ವಿಶ್ವದ ಶ್ರೇಷ್ಠ ಧರ್ಮಗಳಲ್ಲಿ ಒಂದಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಸಿ.ವಿ. ವಂಕಲಕುಂಟಿ ಹೇಳಿದರು.
ಅವರು ಈಚೆಗೆ ಸ್ಥಳೀಯ ಗಣಪತಿ ದೇವಸ್ಥಾನದಲ್ಲಿ ಆಯೋಜಿಸಿದ್ದ ಎಲ್ಲ ವೀರಶೈವ ಒಳ ಪಂಗಡಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
18 ಧರ್ಮಗಳಲ್ಲಿ ವೀರಶೈವ ಧರ್ಮದಲ್ಲಿ ವಿಶಿಷ್ಟ ಸಂಪ್ರದಾಯಗಳಿವೆ. ವೀರಶೈವ ಧರ್ಮವು ರೇಣುಕಾಚಾರ್ಯರಿಂದ ಸ್ಥಾಪಿಸಲ್ಪಟ್ಟಿತು. ಆ ಧರ್ಮದಲ್ಲಿ ಕೆಲವು ಶೈವ ಸಂಪ್ರದಾಯಗಳಾದ ಹೋಮ, ಹವನ, ತಿಥಿ, ನಕ್ಷತ್ರ ಮೊದಲಾದ ವೈದಿಕ ಸಂಪ್ರದಾಯಗಳು ಬಳಕೆಯಲ್ಲಿದ್ದವು. 12ನೇ ಶತಮಾನದ ಶಿವಶರಣರ ಕಾಲದಲ್ಲಿ ಆ ವೀರಶೈವ ಧರ್ಮವು ಸಂಸ್ಕಾರಗೊಂಡು ಲಿಂಗಾಯತ ಧರ್ಮವೆಂದು ಮುಂದುವರಿಯಿತು. ಆದುದರಿಂದ ವೀರಶೈವ ಹಾಗೂ ಲಿಂಗಾಯತ ಸಮಾನ ಅರ್ಥವುಳ್ಳ ಪದಗಳಾಗಿವೆ. 1941ರ ಪೂರ್ವದಲ್ಲಿ ಇದು ಒಂದು ಸ್ವತಂತ್ರ ಧರ್ಮವಾಗಿತ್ತು. ತದನಂತರ ಇದು ಹಿಂದು ಧರ್ಮದ ಭಾಗವಾಗಿ ಪರಿಗಣಿಸಲ್ಪಟ್ಟಿದೆ. ವೀರಶೈವ ಧರ್ಮವು ಸ್ವತಂತ್ರ ಧರ್ಮವಾಗುವ ಎಲ್ಲ ಅರ್ಹತೆಗಳನ್ನು ಪಡೆದಿದೆ. ಇತ್ತೀಚಿಗೆ ಒಳ ಪಂಗಡಗಳ ಸಂಘಟನೆಗಳಿಂದ ಅಖಂಡ ವೀರಶೈವ ಧರ್ಮದ ವಿಕಾಸಕ್ಕೆ ತೊಂದರೆ ಉಂಟಾಗಿದೆ. ಆದ್ದರಿಂದ ಅಖಂಡ ವೀರಶೈವ ಸಂಘಟನೆ ಅವಶ್ಯವಿದೆ. ಇತ್ತೀಚಿನ ಉಪ ಪಂಗಡಗಳ ಭರಾಟೆಯಲ್ಲಿ ಏಕತೆ ಕ್ಷೀಣಿಸುತ್ತದೆ ಈ ಬೆಳವಣಿಗೆಯು ಪ್ರಗತಿಗೆ ಆತಂಕವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಉಪನ್ಯಾಸಕ ಸಿ.ಜಿ. ಹುಡೇದಗಡ್ಡಿ ಮಾತನಾಡಿ, ವೀರಶೈವ ಧರ್ಮ ವಿಶ್ವ ಧರ್ಮವಾಗುವ ಯಾವತ್ತು ಅರ್ಹತೆಗಳನ್ನು ಪಡೆದಿದೆ ಎಂದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಮಲ್ಲನಗೌಡ ಪಾಯಪ್ಪಗೌಡ್ರ ಮಾತನಾಡಿದರು. ಅಂದಾನಗೌಡ್ರ ಪಾಟೀಲ, ಅಶೋಕ ಬೇವಿನಕಟ್ಟಿ, ರುದ್ರಮುನಿ ಹಿರೇಮಠ, ಶ್ರೀಶೈಲಪ್ಪ ಜೋಳದ, ವಿಜಯಕುಮಾರ ಅಂಗಡಿ, ವೀರಣ್ಣ ಹಂಜಿ, ಪ್ರಭುಗೌಡ ನಾಡಗೌಡ್ರ, ನಿಂಗಪ್ಪ ಕಣವಿ ಹಾಜರಿದ್ದರು.
ಈಶ್ವರ ಬೆಟಗೇರಿ ನಿರೂಪಿಸಿದರು. ಎಸ್.ವಿ. ಹಳ್ಳಿಕೇರಿ ಸ್ವಾಗತಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement