ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಮಾಜ ಸುಧಾರಣೆಗೆ ಶ್ರಮಿಸಿದ ಚೌಡಯ್ಯ

Vishwanath S
Updated On : 22 Jan 2014, 2:34 am

ಮುಂಡರಗಿ: ಯಾವುದೇ ಆಸೆ ಇಲ್ಲದವರೇ ನಿಜವಾದ ಶರಣರು ಎಂದು ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಮಂಗಳವಾರ ಪಟ್ಟಣದ ಪುರಸಭೆ ಪಕ್ಕದಲ್ಲಿರುವ ಪೊಲೀಸ್ ಪರೇಡ್ ಮೈದಾನದಲ್ಲಿ ಮುಂಡರಗಿ ತಾಲೂಕು ಗಂಗಾಮತ ಸಮಾಜದವರು ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜನ್ಮದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 12ನೇ ಶತಮಾನದ ಬಸವಣ್ಣನವರ ಅನುಭವ ಮಂಟಪದಲ್ಲಿ ಅಂಬಿಗರ ಚೌಡಯ್ಯನವರದೂ ಅಗ್ರ ಸ್ಥಾನವಿತ್ತು. ಅವರು 330ಕ್ಕೂ ಹೆಚ್ಚು ವಚನಗಳನ್ನು ರಚಿಸುವ ಮೂಲಕ ಸಮಾಜದ ಅಂಕುಡೊಂಕು ತಿದ್ದಲು ಶ್ರಮಿಸಿದ್ದಾರೆ ಎಂದರು. ಪ್ರೊ. ಎಸ್. ಶಿವಾನಂದ ಅಂಬಿಗರ ಚೌಡಯ್ಯನವರ ಕುರಿತು ವಿಶೇಷ ಉಪನ್ಯಾಸ ನೀಡಿದರು. ವೈ.ಎನ್. ಗೌಡರ, ಮಲ್ಲಪ್ಪ ಬಾರಕೇರ ಮಾತನಾಡಿದರು. ಕಲಕೇರಿ-ವಿರೂಪಾಪುರ ಮಠದ ಮಧುಕೇಶ್ವರ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯವಹಿಸಿ ಮಾತನಾಡಿದರು. ತಾಲೂಕು ಗಂಗಾಮತ ಸಮಾಜದ ಅಧ್ಯಕ್ಷ ದೇವಪ್ಪ ಬಾರಕೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರಬಸಪ್ಪ ಹಂಚಿನಾಳ, ರವೀಂದ್ರ ಉಪ್ಪಿನಬೆಟಗೇರಿ, ಹೇಮಂತಗೌಡ ಪಾಟೀಲ, ಧ್ರುವಕುಮಾರ ಹೊಸಮನಿ, ಡಿ.ಡಿ. ಮೋರನಾಳ, ಎಸ್.ಡಿ. ಮಕಾಂದಾರ, ಶ್ರೀಪಾದ ಜೆಲ್ದೆ,  ಮಂಜುನಾಥ ಇಟಗಿ, ಹನುಮಂತಪ್ಪ ಕಾಗನೂರ, ಬಸಪ್ಪ ವಾಲಿಕಾರ, ಸುರೇಶ ಪಂತರ, ರಾಮಣ್ಣ ಬಾರಕೇರ, ಶಂಕರಗೌಡ ತಿಪ್ಪಾಪುರ, ಮಲ್ಲಪ್ಪ ಬಾರಕೇರ, ರಾಯಪ್ಪ ಬಾರಕೇರ, ಯಂಕಪ್ಪ ಬಾರಕೇರ, ಕೊಟ್ರಗೌಡ ಪಾಟೀಲ, ನಾಗರಾಜ ಕೊರ್ಲಹಳ್ಳಿ, ಶಿವಾನಂದ ಬಾರಕೇರ, ಬಿ.ಆರ್. ಕಬ್ಬೇರ,ಪ್ರಶಾಂತ ಪುರದ, ದ್ಯಾಮಣ್ಣ ಮಸಾಲಿ, ಎ.ಪಿ. ದಂಡೀನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಎಲ್.ಎಚ್. ಎಣ್ಣಿ ಸ್ವಾಗತಿಸಿ, ಸಿ.ಎಸ್. ಬಾರಕೇರ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement