ಪತ್ರಕರ್ತನ ಮೇಲೆ ಹಲ್ಲೆ ಖಂಡಿಸಿ ಮನವಿ
ನರಗುಂದ: ಜಿಲ್ಲೆಯ ರೋಣ ತಾಲೂಕಿನ ಗಜೇಂದ್ರಗಡದ ಪತ್ರಕರ್ತ ಡಿ.ಜಿ. ಮೋಮಿನ ಮೇಲೆ ಬಿಜೆಪಿ ಮುಖಂಡ ಎಸ್.ಎಚ್. ಸೋಂಪುರವರು ಹಲ್ಲೆ ಮಾಡಿದ್ದನ್ನು ಖಂಡಿಸಿ ಬುಧವಾರ ನರಗುಂದ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘವು ತಹಸೀಲ್ದಾರ್ಗೆ ಮನಿವಿ ನೀಡಿ ಆರೋಪಿತರನ್ನು ಬಂಧಿಸಲು ಆಗ್ರಹಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ತನ್ನದೇ ಆದ ಸ್ವಾತಂತ್ರ್ಯ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ರಾಜಕೀಯ ಮುಖಂಡರು ಮತ್ತು ಕೆಲವು ಸಮಾಜ ಘಾತುಕರು ಪತ್ರಕರ್ತರ ಮತ್ತು ಛಾಯಾಗ್ರಾಹಕರ ಮೇಲೆ ಹಲ್ಲೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಈ ಕುರಿತು ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತರಾದ ಎಸ್.ಎಸ್. ಮಣ್ಣೂರಮಠ, ಸಿ.ಬಿ. ಸುಬೇದಾರ, ಪ್ರಭು ಗುಡಾರದ, ಎಸ್.ಜಿ. ತೆಗ್ಗಿನಮನಿ, ಬಸವರಾಜ ಹಲಕುರ್ಕಿ, ಎಸ್.ಎಸ್. ಖಾನಪ್ಪಗೌಡರ್, ಆನಂದ ಬನಪ್ಪನರ ಮುಂತಾದವರು ಹಾಜರಿದ್ದರು.