ಪಲ್ಸ್ ಪೋಲಿಯೋಗೆ ಚಾಲನೆ
ನರಗುಂದ: ದೇಶದಿಂದ ಪೋಲಿಯೋವನ್ನು ಶಾಶ್ವತವಾಗಿ ಹೊರಹಾಕುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದು ಶಾಸಕ ಬಿ.ಆರ್. ಯಾವಗಲ್ ಹೇಳಿದರು. ಅವರು ಪಟ್ಟಣದ ಕಸಬಾ ಓಣಿಯ ಬಸವೇಶ್ವರ ದೇವಸ್ಥಾನದಲ್ಲಿ ಭಾನುವಾರ ಮಗುವಿಗೆ ಪೋಲಿಯೋ ಹನಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಗದಗ ಜಿಲ್ಲಾ ಆರೋಗ್ಯ ಹಿರಿಯ ಮೇಲ್ವಿಚಾರಕ ಆರ್.ವಿ. ಕುಪ್ಪಸ್ತ, ತಾಪಂ ಅಧ್ಯಕ್ಷ ಗುರಪ್ಪ ಆದಪ್ಪನವರ, ರಾಜು ಕಲಾಲ, ತಾಲೂಕು ವೈದ್ಯಾಧಿಕಾರಿ ಜಿ.ಎಸ್. ವಸ್ತ್ರದ, ಪುರಸಭೆ ಸದಸ್ಯ ಎಸ್.ಆರ್.ಪಾಟೀಲ, ಶಿವಾನಂದ ಮುತ್ತವಾಡ, ಎಂ.ಎಚ್. ತಿಮ್ಮನಗೌಡ್ರ, ಎಂ.ಆರ್. ಕುಲಕರ್ಣಿ, ವಿ.ಕೆ. ತಳವಾರ, ಎಸ್.ಎಂ. ಮುಗಳಿ, ಬಸವರಾಜ ಕೌಜಗೇರಿ, ಶಿಶು ಅಭಿವೃದ್ಧಿ ಇಲಾಖೆಯ ಪ್ರಭಾರಿ ಅಧಿಕಾರಿ ಮುದರಡ್ಡಿ, ಎಲ್.ಎಸ್. ಗಾಯಕವಾಡ ಹಾಜರಿದ್ದರು.