ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

26ರಂದು ದಿಂಗಾಲೇಶ್ವರ ಶ್ರೀಗಳ ಪಾದಯಾತ್ರೆ

Mainashree
Updated On : 24 Jan 2014, 10:54 am

ಲಕ್ಷ್ಮೇಶ್ವರ:  ಬಾಲೆಹೊಸೂರಿನ ಕುಮಾರ ದಿಂಗಾಲೇಶ್ವರ ಶ್ರೀಗಳಿಂದ ಜ. 26ರಂದು ಪಟ್ಟಣದಲ್ಲಿ ನಡೆಯುವ ದುರ್ಗುಣಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ದುಶ್ಚಟಗಳನ್ನು ಬಿಡಿಸುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದು ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಹೇಳಿದರು.
ಅವರು ಪಟ್ಟಣದ ಪಾರ್ವತಿ ಮಕ್ಕಳ ಬಳಗದ ಸಭಾಂಗಣದಲ್ಲಿ ಬುಧವಾರ ನಡೆದ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಜ. 26ರ ಮಧ್ಯಾಹ್ನ 4ಕ್ಕೆ ಶ್ರೀಗಳ ಪಾದಯಾತ್ರೆ ಮೆರವಣಿಗೆಯು ಪಟ್ಟಣದ ಪಂಪ ವೃತ್ತದಿಂದ ಆರಂಭವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ನಂತರ ಸಂಜೆ ಸೋಮೇಶ್ವರ ತೇರಿನ ಮನೆಯ ಹತ್ತಿರ ಸಭೆಯಾಗಿ ಮಾರ್ಪಡುವುದು. ಪೂರ್ಣ ಕುಂಭ ಹೊತ್ತ ಮಹಿಳೆಯರು, ಡೊಳ್ಳಿನ ಮೇಳ, ಜಾಂಜ್ ಮೇಳಗಳು ಪಾಲ್ಗೊಳ್ಳುವವು ಎಂದರು. ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಗಂಗಮ್ಮ ಫಕ್ಕೀರಸ್ವಾಮಿಮಠ, ಉಪಾಧ್ಯಕ್ಷ ಎಂ.ಆರ್. ಪಾಟೀಲ. ಆರ್.ಎಫ್. ಪುರಾಣಿಕಮಠ, ಡಾ. ವೈ.ಎಫ್. ಹಂಜಿ, ಚೆಂಬಣ್ಣ ಬಾಳಿಕಾಯಿ, ಶಂಕ್ರಪ್ಪ ಮ್ಯಾಗೇರಿ, ಎಲ್.ಸಿ. ಲಿಂಬಯ್ಯಸ್ವಾಮಿಮಠ, ಸೋಮಣ್ಣ ಮುಳಗುಂದ, ಸೋಮಯ್ಯ ಬಾಳಿಹಳ್ಳಿಮಠ, ಚೆನ್ನಪ್ಪ ಜಗಲಿ, ಸಿದ್ದನಗೌಡ ಬೊಳ್ಳೊಳ್ಳಿ, ಶಿವಣ್ಣ ನೆಲವಿಗಿ, ವಿ.ಜಿ. ಪಡಗೇರಿ, ಜಯಕ್ಕ ಕಳ್ಳಿ, ನೀಲಪ್ಪ ಕರ್ಜಕಣ್ಣವರ, ಬಾಬಣ್ಣ ಕೊಟಗಿ, ಬಸವರಾಜ ಬೆಂಡಿಗೇರಿ, ದೇವಣ್ಣ ಬಳಿಗಾರ, ನಾನಾಸಾಹೇಬ ಬಹದ್ದೂರದೇಸಾಯಿ, ಎಂ. ಸಿದ್ದಲಿಂಗಯ್ಯ, ನಾಗರಾಜ ಚಿಂಚಲಿ, ಮಹೇಶ ಹೊಗೆಸೊಪ್ಪಿನ ಹಾಗೂ ಪುರಸಭೆಯ ಹಲವು ಸದಸ್ಯರು, ಸತೀಶ ಮೆಕ್ಕಿ,ಶಂಕರ ಬಾಳಿಕಾಯಿ, ಶರಣು ಗೋಡಿ, ಕಿರಣ ನವಲೆ ಮೊದಲಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement