ಪತ್ರಕರ್ತನ ಮೇಲೆ ಹಲ್ಲೆ: ಜೈ ಭೀಮ ಸೇನಾ ಮನವಿ
ಗದಗ: ರೋಣ ತಾಲೂಕಿನ ಗಜೇಂದ್ರಗಡದಲ್ಲಿ ಪತ್ರಕರ್ತನ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ಜೈ ಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿ ಗದಗ ಜಿಲ್ಲಾ ಘಟಕದಿಂದ ಗುರುವಾರ ತಹಸೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಸಂಘದ ಅಧ್ಯಕ್ಷ ಗಣೇಶ ಹುಬ್ಬಳ್ಳಿ ಮಾತನಾಡಿ, ಪತ್ರಕರ್ತನ ಮೇಲಿನ ಹಲ್ಲೆ ಖಂಡಿಸಿ, ಹಲ್ಲೆ ಮಾಡಿದ ವ್ಯಕ್ತಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇದರಿಂದ ಪತ್ರಕರ್ತರು ನಿರ್ಭಯವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದರು. ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಪಿ. ಪರಾಪುರ, ಉಪಾಧ್ಯಕ್ಷ ಮಂಜುನಾಥ ತೌಜಲ, ರಾಜ್ಯ ಕಾರ್ಯದರ್ಶಿ ಅಶೋಕ ಹಾದಿಮನಿ, ಸಂಘಟನೆಯ ಪದಾಧಿಕಾರಿಗಳು ಮಾತನಾಡಿದರು.
ವಿಜಯ ಕಲ್ಮನಿ, ದೀಪಕ ಕಲ್ಮನಿ, ಪರಶುರಾಮ ಸಂಗಾಪುರ, ಓಬಳೇಶ ಯಶವಂತಪುರ, ಮಂಜುನಾಥ ಪರಾಪುರ, ಹೇಮಂತ ಹುಬ್ಬಳ್ಳಿ, ಮುತ್ತು ಭರಮಗೌಡ್ರ, ಮಂಜು ಪರ್ವತಗೌಡ್ರ, ಬಸವರಾಜ ಬದಾಮಿ, ಪ್ರೇಮ ಹುಬ್ಬಳ್ಳಿ, ಶಂಕರ ಹುಬ್ಬಳ್ಳಿ, ರಾಘವೇಂದ್ರ ಬಳ್ಳಾರಿ, ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ರಾಷ್ಟ್ರೀಯನ ಜೋಶೆಪ್, ರಾಘವೇಂದ್ರ ಯಟ್ಟಿ, ಅನ್ನಪ್ಪ ರಾಮಗಿರಿ ಮುಂತಾದವರು ಉಪಸ್ಥಿತರಿದ್ದರು.