ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜನಪದ ಸಂಸ್ಕೃತಿ ಬೆಳೆಸಿ

Vishwanath S
Updated On : 27 Jan 2014, 12:26 pm

ಕನ್ನಡಪ್ರಭ ವಾರ್ತೆ, ಗದಗ, ಜ. 26
ಗ್ರಾಮೀಣ ಜನರ ಧಣಿವನ್ನು ಮರೆಸಲು ಜನಪದ ಹಾಡುಗಳು ಸಹಕಾರಿಯಾಗಿವೆ. ಜಾನಪದ ಸೊಗಡಿನ ಅನೇಕ ಹಾಡುಗಳ ಮೂಲಕ ಸಮಾಜದ ವೀರ ಪುರುಷರ ಚರಿತ್ರೆಯನ್ನು ತಿಳಿಯಬಹುದು ಎಂದು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹೇಳಿದರು.
ಅವರು ಈಚೆಗೆ ತಾಲೂಕಿನ ಹುಯಿಗೋಳ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಸಾಂಸ್ಕೃತಿಕ ಭಜನಾ ಮಂಡಳಿ ಹುಯಿಲಗೋಳ ಇವುಗಳ ಆಶ್ರಯದಲ್ಲಿ ಜರುಗಿದ ರಾಜ್ಯಮಟ್ಟದ ಜಾನಪದ ಕಲಾಮೇಳವನ್ನು ಉದ್ಘಾಟಿಸಿ ಮಾತನಾಡಿದರು.  
ಟಿವಿ, ಮೊಬೈಲ್, ಇಂಟರ್‌ನೆಟ್‌ನ್ನು ಒಳ್ಳೆಯ ಕಾರ್ಯಕ್ಕೆ ಯುವ ಜನತೆ ಬಳಸಬೇಕು. ಕೆಲವರು ತಪ್ಪುದಾರಿ ತುಳಿಯತ್ತಿರುವುದು ವಿಷಾದನೀಯ ಎಂದರು. ಯುವ ಜನತೆಯು ನಮ್ಮ ಪೂರ್ವಿಕರ ಜನಪದ ಸಂಸ್ಕೃತಿಯನ್ನು ಅರಿತುಕೊಂಡು ಜನಪದ ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸಬೆಕು. ಜನಪದ ಹಾಡುಗಳಾದ ಲಾವಣಿ, ರಂಗಗೀತೆ, ಸುಗ್ಗಿ ಹಾಡು, ಡೊಳ್ಳು ಕುಣಿತ, ಗೀಗಿಪದ, ವೀರಗಾಸೆ, ದೊಡ್ಡಾಟ, ಸಣ್ಣಾಟ, ಹಂತಿಪದ, ರಿವಾಯತಿ ಪದ, ಸೋಬಾನೆಪದ, ಬೀಸುವ ಮತ್ತು ಕುಟ್ಟುವಹಾಡು, ಜಗ್ಗಲಿಗೆ, ಹೋಳಿಹಾಡು ಮುಂತಾದ ಜಾನಪದ ಹಾಡು. ರೈತರ, ಶ್ರಮಿಕರ ದಣಿವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವುದಲ್ಲದೆ, ಸಾಹಿತ್ಯ ಕ್ಷೇತ್ರಕ್ಕೆ ಕಿರೀಟ ಪ್ರಾಯವಾಗಿವೆ. ಇವುಗಳನ್ನು ಉಳಿಸಿ ಬೆಳೆಸುವಲ್ಲಿ ಸರ್ಕಾರವು ಹತ್ತು ಹಲವಾರು ಕಾರ್ಯಯೋಜನೆ ರೂಪಿಸಿದ್ದು, ಅದರ ಪ್ರಯೋಜನ ಪಡೆದು ಜನಪದ ಕಾರ್ಯಕ್ರಮವನ್ನು ರಾಜ್ಯದ ಎಲ್ಲ ಗ್ರಾಮದಲ್ಲಿ ನಡೆಸಬೇಕು ಎಂದರು. ಡಾ. ಅಂದಾನಯ್ಯ ಹಿರೇಮಠ ಮಾತನಾಡಿ, ಜನಪದ ಕಲೆ ಗ್ರಾಮೀಣ ಜನರಲ್ಲಿ ಇನ್ನೂ ಜೀವಂತವಾಗಿವೆ. ಅನೇಕ ಹಿರಿಯ ಕಲಾಕಾರು ತಮ್ಮ ಪ್ರತಿಭೆಯನ್ನು ಯಾವುದೇ ಫಲಾಪೇಕ್ಷೆಯಿಲ್ಲದೆ ಪ್ರದರ್ಶಿಸಿ, ಜನಮನ ಗೆದ್ದು ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ. ನಾಟಕ ಕ್ಷೇತ್ರದಲ್ಲಿ ಗದುಗಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಪ್ಲೋರಿನಾಬಾಯಿ, ಹಾಡುಗಾರಿಕೆಯಲ್ಲಿ ಶೋಭಾ ಹುಯಿಲಗೋಳ, ನಾಡಿನ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಅವರಂತೆ ಹೊಸ ಯುವ ಕಲಾವಿದರು, ಜನಪದ ಕ್ಷೇತ್ರಕ್ಕೆ ಸೇವೆಗೈಯ್ಯಲು ಮುಂದೆ ಬರಬೇಕು ಎಂದರು.
ಬಸವರಾಜ ಈರಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಬಾದಾಮಿ, ದೇವಪ್ಪ ಲಿಂಗದಾಳ, ಡಾ. ಅಂದಾನಯ್ಯ ಹಿರೇಮಠ, ಸೈಕ್ಲಿಂಗ್ ಕ್ರೀಡಾಪಟು ಬಾಬು ಚಲವಾದಿ, ಶೋಭಾ ಹುಯಿಲಗೋಳ, ವಿಶ್ವನಾಥ ದೇಸಾಯಿ ಮುಂತಾದವರನ್ನು ಸನ್ಮಾನಿಸಲಾಯಿತು. ಸಿದ್ದಪ್ಪ ಲಿಂಗದಾಳ, ಮಲ್ಲಿಕಾರ್ಜುನ ಗುಜ್ಜಾಯಿ, ಗ್ರಾಪಂ ಸದಸ್ಯ ಗೊಖಲೆಪ್ಪ ಬಿಳೆಯಲಿ, ಪಕ್ಕೀರವ್ವ ಕಡಿಯವರ, ಮಂಜುಳಾ ಪೊಲೀಸ್‌ಪಾಟೀಲ, ಡಾ. ಸಂತೋಷ ಯಾವಗಲ್ಲ, ಶಂಕ್ರಪ್ಪ ಈರಣ್ಣವರ, ಸೋಮಪ್ಪ ಕಡಿಯವರ, ತಿರಕಪ್ಪ ಕಡಿಯವರ, ಮಾರುತಿ ಕಾಳೆ, ಶರಣಪ್ಪ ಕಡಿಯವರ, ಮಾದೇವಪ್ಪ ಕಡಿಯವರ, ಕನಕಪ್ಪ ಹುರಕನವರ, ಮೈಲಾರಪ್ಪ ಹುರಕನವರ, ಅಶೋಕ ಬೆಳಗಟ್ಟಿ, ರಮೇಶ ಬೆಳಗಟ್ಟಿ, ವಿಶ್ವನಾಥ ದೇಸಾಯಿ, ಮೃತ್ಯುಂಜಯ ಕುಲಕರ್ಣಿ. ಶಿಕ್ಷಕ ಪ್ರಕಾಶ ಕಾಳೆ, ಪರಸಪ್ಪ ಕಡಿಯವರ ಮುಂತಾದವರು ಉಪಸ್ಥಿತರಿದ್ದರು. ಶರಣಪ್ಪ ಕಡಿಯವರ ಸ್ವಾಗತಿಸಿದರು. ಮೃತ್ಯುಂಜಯ ಕುಲಕರ್ಣಿ ನಿರೂಪಿಸಿದರು. ಮಿಲಿಂದ ಕಾಳೆ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement