ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನ್ಯಾಯವಾದಿಗಳು ಸಾಹಿತ್ಯ ಓದುವ ಅಭಿರುಚಿ ಬೆಳೆಸಿಕೊಳ್ಳಿ

Vishwanath S
Updated On : 27 Jan 2014, 12:27 pm

ಗದಗ:  ವಕೀಲ ವೃತ್ತಿಯೊಂದಿಗೆ ಸಾಹಿತ್ಯ ರಚನೆ ಅಷ್ಟು ಸುಲಭವಲ್ಲ. ಸಾಹಿತ್ಯ ರಚಿಸುವ ವಕೀಲರುಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ರಾಜ್ಯ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ ಗಂಗಾವತಿಯ ಅರಳಿ ನಾಗರಾಜ ಹೇಳಿದರು.
ಅವರು ಬುಧವಾರ ಸ್ಥಳೀಯ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಧರ್ಮ ಯಾವುದು? ವಚನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.
ಬಹುತೇಕ ವಕೀಲರು ಕಕ್ಷಿದಾರರಿಗೆ ನ್ಯಾಯ ಒದಗಿಸುವಲ್ಲೇ ಸಮಯ ಕಳೆಯಬೇಕಾಗುತ್ತದೆ. ಕೇವಲ ಕಾನೂನಿನ ಅಧ್ಯಯನದಲ್ಲಿ ತೊಡಗುವ ವಕೀಲರು ಸಾಹಿತ್ಯ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಎಸ್.ಎಸ್. ಮುರಗೋಡ, ಸಾಹಿತಿ ಪ್ರಾ. ಚಂದ್ರಶೇಖರ ವಸ್ತ್ರದ ಮಾತನಾಡಿದರು. ಗ್ರಂಥಕರ್ತ ನ್ಯಾಯವಾದಿ ಡಿ.ಎಂ. ನದಾಫ, ಗದಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವಿ.ಜಿ. ಹುಬ್ಬಳ್ಳಿ, ಸಿ.ಡಿ. ಹುಯಿಲಗೋಳ, ಎಂ.ಆರ್. ಹರ್ಲಾಪೂರ, ಅಂಬಾದಾಸ ಕುಲಕರ್ಣಿ, ಎಂ. ಶೋಭಾ, ಪುಂಡಲೀಕ ಹೊಸಮನಿ, ಸರ್ವಮಂಗಳಾ ಚಿಕ್ಕನಗೌಡರ, ಸುವರ್ಣ, ಎಸ್.ಸಿ. ರಾಚಯ್ಯನವರ, ಎಸ್.ಕೆ. ನದಾಫ, ಎಸ್.ಕೆ. ಮೇಟಿ, ಎಂ.ಎಂ. ಕಟ್ಟಿಮನಿ, ಎಸ್.ಸಿ. ಹೊಸಮನಿ, ಎಸ್.ಎಸ್. ಶೆಟ್ಟರ, ಎಸ್.ಎಸ್. ನೀಲಗುಂದ, ಎಂ.ಎ. ಸಂಗನಾಳ, ಎಂ.ಎಸ್. ಹಾಳಕೇರಿ ಎಂ.ಎಲ್. ಅಕ್ಕಿ ಉಪಸ್ಥಿತರಿದ್ದರು. ಕೆ.ಎಲ್. ಕರಿಗೌಡ್ರ ಸ್ವಾಗತಿಸಿದರು. ಡಿ.ಎಚ್. ಮಲ್ಲೇಶ ನಿರೂಪಿಸಿದರು. ಎ.ಎಸ್. ಮಕಾನದಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement