ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸ್ವಾತಂತ್ರ್ಯಕ್ಕಾಗಿ ಮಡಿದವರ ಸ್ಮರಿಸಿ

Vishwanath S
Updated On : 27 Jan 2014, 12:26 pm

ಶಿರಹಟ್ಟಿ: ಗಣರಾಜ್ಯೋತ್ಸವ ಐತಿಹಾಸಿಕ ದಿನವಾಗಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಮಡಿದವರ, ಎಲ್ಲ ಸ್ವಾತಂತ್ರ್ಯ ಸೇನಾನಿಗಳಿಗೆ ಗೌರವ ಸಲ್ಲಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಭಾನುವಾರ ಪಟ್ಟಣದ ಕಂದಾಯ ಇಲಾಖೆ ಸಂಕೀರ್ಣ ತಾಲೂಕು ಕಚೇರಿ ಶಿರಹಟ್ಟಿಯಲ್ಲಿ 65ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಸರ್ವಧರ್ಮ ಸಮನ್ವಯ, ಸಾಮಾಜಿಕ ಸಮಾನತೆ ಮತ್ತು ಸಾವಿರಾರು ವರ್ಷಗಳ ಭವ್ಯ ಪರಂಪರೆಯ ಪ್ರತೀಕವಾದ ಭಾರತೀಯತ್ವದ ಪ್ರೇರಣೆಯಿಂದ ರೂಪಿತಗೊಂಡಿರುವ ಸಂವಿಧಾನವನ್ನು ಎಲ್ಲರೂ ಸ್ವೀಕರಿಸಿ ಆಚರಣೆಗೆ ತರಲು ನಿರ್ಧರಿಸಿದ್ದು ಇದೇ ಪವಿತ್ರ ದಿನದಂದು ಎಂದರು.
ತಹಸೀಲ್ದಾರ್ ಆರ್.ಬಿ. ನಿಂಗನಗೌಡ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತವು ಎಲ್ಲ ರಂಗಗಳಲ್ಲಿ ಅಭಿವೃದ್ಧಿ ಸಾಧಿಸಿದ್ದು, ಸಾಮಾಜಿಕ ನ್ಯಾಯ ಒದಗಿಸುವಲ್ಲಿ ವಿಫಲವಾಗಿದ್ದೇವೆ. ಅದಕ್ಕಾಗಿ ಸಾಮಾಜಿಕ ಬದುಕಿನಲ್ಲಿ ಸಾಮಾಜಿಕ ಮೌಲ್ಯಗಳನ್ನು ಕಾಪಾಡಿಕೊಳ್ಳುವ ಅನಿವಾರ್ಯತೆಯಿದೆ. ದೇಶದ ಸಮಸ್ತ ನಾಗರಿಕರಿಗೆ ಸಮಾನ ಸ್ಥಾನಮಾನ ಒದಗಿಸಲು, ರಾಷ್ಟ್ರದ ಸರ್ವಾಂಗೀಣ ಪ್ರಗತಿಯ ಜತೆಗೆ ಸುಭದ್ರ ಸಾರ್ವಭೌಮ ರಾಷ್ಟ್ರಕಟ್ಟಲು ಯುವಕರು ಪಣತೊಡಬೇಕು ಎಂದು ಕರೆ ಕೊಟ್ಟರು.
ಪಪಂ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಜಿಪಂ ಸದಸ್ಯ ಎಂ.ಎಸ್. ದೊಡ್ಡಗೌಡರ, ಪಪಂ ಸದಸ್ಯ ಎಚ್.ಡಿ. ಮಾಗಡಿ, ಸಂತೋಷ ಕುರಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಮಾತನಾಡಿದರು. ತಾಪಂ ಅಧ್ಯಕ್ಷೆ ಸುನಂದಾ ಬಿದರಳ್ಳಿ, ಪಪಂ ಉಪಾಧ್ಯಕ್ಷೆ ಮೀನಾಕ್ಷಿ ತಳವಾರ, ಲಲಿತಾ ಕಲ್ಲಪ್ಪನವರ, ಬುಡನಶ್ಯಾ ಮಕಾನದಾರ, ಗೂಳಪ್ಪ ಕರಿಗಾರ, ಮಹಬೂಬ ಮುಳಗುಂದ, ವೈ.ಎಸ್. ಪಾಟೀಲ, ಇಒ ವೈ.ಎಲ್. ಹಂಪಣ್ಣ, ಸಿಪಿಐ ಶ್ರೀನಿವಾಸ ಮೇಟಿ, ಜೆ.ಆರ್. ಹೆಗಡೆ, ಪಿಡಬ್ಲೂಡಿ ಇಲಾಖೆಯ ಎಲ್.ವೈ. ಮಾಳೋದೆ ಇದ್ದರು. ಎಸ್.ಬಿ. ಕೋರಿಶೆಟ್ಟರ ಸ್ವಾಗತಿಸಿದರು. ಎಂ.ಕೆ. ಲಮಾಣಿ ನಿರೂಪಿಸಿ, ವಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement