ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜಿನ್ನಿಂಗ್ ಫ್ಯಾಕ್ಟರಿ ಮತ್ತೆ ಶುರು: ಪ್ರತಿಭಟನೆ

Vishwanath S
Updated On : 29 Jan 2014, 11:10 am

ಗಜೇಂದ್ರಗಡ: ಸಮೀಪದ ಕಾಲಕಾಲೇಶ್ವರ, ರಾಜೂರ ಗ್ರಾಮದಲ್ಲಿ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಆದೇಶ ಧಿಕ್ಕರಿಸಿ ಜನರ ಬದುಕಿಗೆ ಕಂಟಕವಾದ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಸೆಲ್ಪರಿಕ್ ಆ್ಯಸಿಡ್ ಬಳಸಿ ಹತ್ತಿಬೀಜ ಮೇಲ್ಭಾಗ ಪದರು ಕಳಚುವ ಡಿಲಿಂಕ್ ಮಾಡುವ ಕಾರ್ಯ ಮತ್ತೆ ಪ್ರಾರಂಭಿಸಿರುವುದನ್ನು ವಿರೋಧಿಸಿ ಮಂಗಳವಾರ ರೈತರು ಸ್ಥಳಕ್ಕೆ ತೆರಳಿ ಪ್ರತಿಭಟನೆ ನಡೆಸಿದರು.
ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಡಿಲಿಂಕ್ ಮಾಡುವುದು ಕೆಲ ದಿನ ಸ್ಥಗಿತಗೊಳಿಸಿದ ಬಳಿಕ ಈಗ ಮತ್ತೆ ಶುರು ಮಾಡಿರುವುದು ಆಡಳಿತ ವ್ಯವಸ್ಥೆ ಬಗೆಗೆ ಜನರಲ್ಲಿ ಸಂಶಯ ಮೂಡಿದೆ. ಕಾಲಕಾಲೇಶ್ವರ ಗ್ರಾಮ ಎರಡೂ ರಾಜೂರ ಗ್ರಾಮ ಜಿನ್ನಿಂಗ್ ಫ್ಯಾಕ್ಟರಿಗೆ ಪರಿಸರ ಮತ್ತು ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಇಲಾಖೆ ಜಿಲ್ಲಾ ಅಧಿಕಾರಿ ಶೋಭಾ ಗಜಕೋಶ ರೈತರ ದೂರಿನ ಮೇರೆಗೆ ಈಚೆಗೆ ಭೇಟಿ ನೀಡಿದ್ದರು.
ಪರಿಸರದ ಮೇಲೆ ಆಸಿಡ್ ಹರಿದಿರುವ ವಾಸ್ತವ ಕಂಡು ಜಿನ್ನಿಂಗ್ ಫ್ಯಾಕ್ಟರಿ ಮಾಲೀಕರನ್ನು ಅವರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಆದರೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಬಂಡವಾಳ ಶಾಹಿಗಳ ಜತೆ ಶಾಮೀಲಾಗಿ ರೈತರ ಬದುಕಿನ ಜತೆ ಚೆಲ್ಲಾಟವಾಡುತ್ತಿದ್ದಾರೆ. ಪರಿಸರ ಹಾಳು ಮಾಡುವುದಕ್ಕೆ ಎಲ್ಲವೂ ನಾಟಕಮಯವಾಗಿದೆ ಎಂದು ರೈತರು ಅಪಾದಿಸಿದರು.
ಈ ಎರಡೂ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಹತ್ತಿಕಾಳು ಡಿಲಿಂಕ್ ಮಾಡಲು ಸೆಲ್ಫರಿಕ್ ಆಸಿಡ್ ಯಂತ್ರ ಹಾಗೂ ಜಿನ್ನಿಂಗ್ ಯಂತ್ರಗಳನ್ನು ಪರಿಶೀಲನೆ ನಡೆಸಿದ್ದರು. ಪರವಾನಗಿ ಇಲ್ಲದೇ ಫ್ಯಾಕ್ಟರಿ ಮಾಲೀಕರಿಗೆ ಶೋಕಾಸ್ ನೋಟಿಸ್ ನೀಡಿದರು. ಪಕ್ಕದಲ್ಲಿ ಕೆರೆ ಸ್ವರೂಪದಲ್ಲಿ ಶೇಖರಿಸಿದ ಮೂರು ಕಡೆಯ ಇಂಗು ಗುಂಡಿಯ ಆ್ಯಸಿಡ್‌ನ್ನು ಬಾಟಲಿಯಲ್ಲಿ ಶಾಂಪಲ್ ಪಡೆದಿದ್ದರು. ಪೊಲೀಸರಿಗೆ ನಿಗಾ ವಹಿಸಲು ಸೂಚಿಸಿದರು. ಆದರೆ, ಜಿಲ್ಲಾಡಳಿತ ವೈಫಲ್ಯ ಎದ್ದು ಕಾಣುತ್ತಿದೆ. ಎಲ್ಲವೂ ಅಯೋವುಯವಾಗಿದೆ ಎಂದು ಅಪಾದಿಸಿದರು.
ಕಾಲಕಾಲೇಶ್ವರ ಗ್ರಾಮ ಬಳಿಯ ಖಾಸಗಿ ಒಡೆತನದ ಹತ್ತಿಮಿಲ್‌ನಲ್ಲಿ ಹತ್ತಿಬೀಜ ಡಿಲಿಂಕ್ ಮಾಡಿದ ಆಸಿಡ್ ಬೇಕಾಬಿಟ್ಟಿ ಹರಿಯಬಿಟ್ಟಿದ್ದಾರೆ. ಇದರಿಂದ ಸುತ್ತಲಿನ ವಾತಾವರಣ ಮಲಿನ ಜತೆ ಜನರ ಆರೋಗ್ಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಗಜೇಂದ್ರಗಡದಿಂದ ಕಾಲಕಾಲೇಶ್ವರ ಗ್ರಾಮಕ್ಕೆ ಸಂಚರಿಸುವ ರಸ್ತೆ ಪಕ್ಕದಲ್ಲಿ ಜಿನ್ನಿಂಗ್ ಫ್ಯಾಕ್ಟರಿಯಿಂದ 1 ಕಿಲೋ ಮೀಟರ್ ದೂರದವರೆಗೂ ಆಸಿಡ್ ಜತೆ ಕೆಮಿಕಲ್‌ಯುಕ್ತ ವಿಷಕಾರಕ ದ್ರವ ಹರಿದಿರುವ ಬಳಿಯ ಮರಗಿಡಗಳು ಒಣಗಿವೆ. ಪರಿಸರ ವಾತಾವರಣ ಹದಗೆಟ್ಟಿದೆ. ರೈತರ ಜೀವಕ್ಕೆ ಅಪಾಯ ಎದುರಾಗಿರುವುದನ್ನು ತಪ್ಪಿಸಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಪಂ ಸದಸ್ಯ ಪಿ.ವೈ. ಚಿಲ್‌ಝರಿ, ಸಂಗಪ್ಪ ಹೂಗಾರ, ಎಸ್.ಎಸ್. ಜಾದವ, ವೀರಯ್ಯಾ ಹಿರೇಮಠ, ಆನಂದ ಭಾಂಡಗೆ, ಸುನೀಲ ಚಿಲ್‌ಝರಿ, ಮಂಜುನಾಥ ಭಜೇಂತ್ರಿ, ಮಲ್ಲಿಕಾರ್ಜುನ ಕೆಂಪನಾಳ, ಮಂಜುನಾಥ ಮರಡಿ, ಮುತ್ತು ಕನ್ಯಾಳ, ಕಾಳಿಂಗ ಚಿಲ್‌ಝರಿ, ಮಂಜುನಾಥ ಭಜಂತ್ರಿ, ಶರಣಪ್ಪ ಚಿಲ್‌ಝರಿ, ಮಲ್ಲನಗೌಡ ಪಾಟೀಲ, ಠಾಕೂಸಾ ಗಾಂಜಿ, ಮಲ್ಲಪ್ಪ ಕನ್ಯಾಳ, ಶರಣಪ್ಪ ಕನ್ಯಾಳ, ಕಳಕಪ್ಪ ಭಜಂತ್ರಿ, ಮುತ್ತು ಪಾಟೀಲ, ಪರಸಪ್ಪ ಕನ್ಯಾಳ, ಶಂಕ್ರಪ್ಪ ಹೂಗಾರ, ಕೆ.ಎಸ್. ಹೂಗಾರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement