ಜಿಲ್ಲೆಯಲ್ಲಿ ಅಲ್ಲಲ್ಲಿ ಗಣರಾಜ್ಯೋತ್ಸವ
ಗದಗ: ಶಹರದ ಜೈಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿ ಗದಗ ಜಿಲ್ಲಾ ಘಟಕ ಕಾರ್ಯಾಲಯದಲ್ಲಿ ಮಹಾತ್ಮಾಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುದರೊಂದಿಗೆ ಗಣರಾಜ್ಯೋತ್ಸವ ಆಚರಿಸಲಾಯಿತು.
ಸಮಿತಿ ಅಧ್ಯಕ್ಷ ಗಣೇಶ ಹುಬ್ಬಳ್ಳಿ ಅಧ್ಯಕ್ಷತೆ ವಹಿಸಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಂತರ ಧ್ವಜಾರೋಹಣ ನೆರವೇರಿಸಿದರು. ಸಹಕಾರ್ಯದರ್ಶಿ ಅಶೋಕ ಹಾದಿಮನಿ, ರಾಘವೇಂದ್ರ ಪರಾಪುರ, ಮಂಜುನಾಥ ತೌಜಲ್, ದೀಪಕ ಕಲ್ಮನಿ, ಪರಶುರಾಮ ಸಂಗಾಪುರ, ಓಬಲೇಶ ಯಶವಂತಪುರ, ಹೇಮಂತ ಹುಬ್ಬಳ್ಳಿ, ಶಂಕರ ಹುಬ್ಬಳ್ಳಿ, ಶ್ರೀಕಾಂತ ರಾಮಗಿರಿ, ವಿಶ್ವನಾಥ ಹುಬ್ಬಳ್ಳಿ, ಬಸವರಾಜ ಬದಾಮಿ, ಮಂಜುನಾಥ ಪರಾಪುರ ಇದ್ದರು.
ಸಂವಿಧಾನ ಅಂಬೇಡ್ಕರ್ ಕೊಡುಗೆ
ಗದಗ: ದೇಶದ ಮಹಾನ್ ಮೇಧಾವಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಈ ದೇಶಕ್ಕೆ ನೀಡಿದ ಅಮೂಲ್ಯ ಕೊಡುಗೆ ಎಂದರೆ ಅದು ಸಮಾನತೆ, ಜಾತ್ಯತೀತತೆ, ಅಭಿವೃದ್ದಿ ಸಾರುವ ಸಂವಿಧಾನ ಎಂದು ನಗರಸಭೆ ಸದಸ್ಯ ಎಲ್.ಡಿ. ಚಂದಾವರಿ ಹೇಳಿದರು.
ಅವರು ಭಾನುವಾರ ರಾಜೀವ್ಗಾಂಧಿ ನಗರದ ಸಾರ್ವಜನಿಕ ಗ್ರಂಥಾಲಯದ ಮುಂಭಾಗದಲ್ಲಿ ವಿವಿಧೋದ್ದೇಶಗಳ ಅಭಿವೃದ್ದಿ ಸಂಘ, ಮಹಿಳಾ ವಿವಿಧೋದ್ದೇಶಗಳ ಸಂಘ, ಡಿ.ಡಿ. ಚಂದಾವರಿ ಶಿಕ್ಷಣ ಶಿಕ್ಷಣ ಸಂಸ್ಥೆ, ಬನ್ನಿಮಹಾಂಕಾಳಿ ಮಹಿಳಾ ಸ್ವ-ಸಹಾಯ ಸಂಘ, ಈಶ್ವರಿ ಸ್ತ್ರೀ ಶಕ್ತಿ ಮಹಿಳಾ ಸ್ವಸಹಾಯ ಸಂಘ, ಸರಸ್ವತಿ ಸ್ತ್ರೀ ಮಹಿಳಾ ಸ್ವಸಹಾಯ ಸಂಘ, ಶಿವಗಂಗಾ ಮಹಿಳಾ ಸ್ವಸಹಾಯ ಸಂಘ ಇತರೆ ಸಂಘಟನೆಗಳ ಆಶ್ರಯದಲ್ಲಿ ನಡೆದ 65ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಈ ಸಂದರ್ಭ ಪ್ರಕಾಶ ಬನ್ನಿಗಿಡದ, ಯು.ಡಿ. ಅಂಗಡಿ, ಅಂದಾನಪ್ಪ ವಿಭೂತಿ, ಯೂಸೂಫ ಡಂಬಳ, ರಜಾಕಸಾಬ ಕಟ್ಟಿಮನಿ, ದಾಕ್ಷಾಯಿಣಿ ಶಿರೂರ, ಪ್ಯಾರಿಜಾನ್ ಹಬ್ಬೂನವರ, ಪಾರ್ವತಿಬಾಯಿ ಕನಕೇರಿ, ಸುಜಾತಾ ಕೋಟಿ, ಸುಜಾತಾ ಕಣವಿ, ಯಲ್ಲಮ್ಮ ಪೂಜಾರ, ಮೀನಾಕ್ಷಿ ಸಕ್ರಿ, ಪ್ರೇಮಾ ಬಾವಿಕಟ್ಟಿ, ಕುರಿ ಇದ್ದರು.
ದೇಶದ ಸಮಗ್ರತೆ ಜಾಗೃತಿ ಅವಶ್ಯ
ಗದಗ: ರಾಷ್ಟ್ರೀಯ ಹಬ್ಬಗಳಲ್ಲಿ ಪ್ರತಿಯೊಬ್ಬರು ಭಾಗವಹಿಸುವುದರಿಂದ ದೇಶದ ಏಕತೆ ಮತ್ತು ಸಮಗ್ರತೆಯ ಬಗ್ಗೆ ಜಾಗೃತಿ ಮೂಡಲಿದೆ ಎಂದು ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಹೇಳಿದರು.
ಅವರು ಭಾನುವಾರ ನಗರದ ಸಂಸದ ಶಿವಕುಮಾರ ಉದಾಸಿ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ 65ನೇ ಗಣರಾಜ್ಯೋತ್ಸವದಲ್ಲಿ ಮಾತನಾಡಿದರು. ಧ್ವಜಾರೋಹಣವನ್ನು ಗದಗ ಬಿಜೆಪಿ ಶಹರ ಅಧ್ಯಕ್ಷ ಈಶಣ್ಣ ಮುನವಳ್ಳಿ ಅವರು ನೆರವೇರಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಂ. ಹಿರೇಮಠ, ಕಾಂತಿಲಾಲ ಬನ್ಸಾಲಿ, ಸಿದ್ದಣ್ಣ ಬಂಗಾರಶೆಟ್ಟರ, ಬಸವರಾಜ ಶಿರಿ, ಚಂದ್ರು ತಡಸದ, ರಾಜು ಕುರಡಗಿ, ಶ್ರೀನಿವಾಸ ಹುಬ್ಬಳ್ಳಿ, ಜಗನ್ನಾಥಸಾ ಬಾಂಡಗೆ, ಅರವಿಂದ ಹುಲ್ಲೂರ, ಸುರೇಶ ಗುಂಜಾಳ, ಚಂದ್ರು ವರ್ಣೇಕರ, ವಂದನಾ ವರ್ಣೇಕರ, ಸುಶೀಲಾ ಶಿರಿ, ಜಯಶ್ರೀ ಉಗಲಾಟದ, ಪಾರ್ವತಿ ಮರಿಗೌಡ್ರ, ಶಾರದಾ ಸಜ್ಜನರ, ರೇಣುಕಾ ಬೆಳವಟಗಿ, ಕಮಲಾ ಸೋಮರಡ್ಡಿ, ಅಶ್ವಿನಿ ಜಗತಾಪ, ಪ್ರೇಮಾ ಇದ್ದರು.
ಶರಣ ಬಸವೇಶ್ವರ ಶಾಲೆ
ಗದಗದ ಶರಣಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ 65ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಶಿವನಗೌಡ್ರ ಮಲ್ಲಾಪುರ ಧ್ವಜಾರೋಹಣ ನೆರವೇರಿಸಿದರು. ಲೀಲಾ ಪಾಟೀಲ, ಡಿ.ಬಿ. ಹೂಗಾರ, ಸುಮಿತ್ರಾ ಮುದಗಲ್, ಎಂ.ಎಸ್. ಮಲ್ಲಾಪುರ, ನಾಗಪ್ಪ ಗಬ್ಬಿ, ಎಸ್.ಎಂ. ಕೊಟಗಿ, ವೈ.ಆರ್. ಪಾಟೀಲ, ತೋಟಪ್ಪ ಅಕ್ಕಿ, ಡಿ.ಬಿ. ಹೂಗಾರ, ನಾಗಪ್ಪ ಗಬ್ಬಿ ಇದ್ದರು.
ನಟ ವಿಜಯ ರಾಘವೇಂದ್ರ ಧ್ವಜಾರೋಹಣ
ಗದಗ: ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಡಾ.ಪಂ. ಪುಟ್ಟರಾಜಕವಿ ಗವಾಯಿಗಳವರ ಅಂಧರ ಶಿಕ್ಷಣ ಸಮಿತಿಯ ಅಂಗ ಶಿಕ್ಷಣ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜರುಗಿದ 65ನೇ ಗಣರಾಜ್ಯೋತ್ಸವವನ್ನು ನಟ ವಿಜಯ ರಾಘವೇಂದ್ರ ನೆರವೇರಿಸಿದರು.
ಕಳೆದ ಕೆಲ ದಿನಗಳಿಂದ ವೀರೇಶ್ವರ ಪುಣ್ಯಾಶ್ರಮದಲ್ಲಿ ಪದ್ಮಭೂಷಣ ಡಾ.ಪಂ. ಪುಟ್ಟರಾಜ ಕವಿಗವಾಯಿಗಳವರ ಜೀವನಾಧಾರಿತ ಚಲನಚಿತ್ರದ ಚಿತ್ರಿಕರಣ ನಡೆಯುತ್ತಿದ್ದು, ಲಿಂ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಪಾತ್ರ ಧರಿಸಿದ್ದ ನಟ ವಿಜಯ ರಾಘವೇಂದ್ರ ಧ್ವಜಾರೋಹಣ ನೆರವೇರಿಸಿದರು.
ಚಿತ್ರ ನಿರ್ಮಾಣದ ರೂವಾರಿ ಹಂಸ ವಿಜೇತೆ ಮತ್ತು ಶ್ಯಾಮ ನವಲೆ ಹಾಗೂ ಮಹೇಶ ಪುರಾಣಿಕಮಠ, ಶಿವಾನಂದ ಗಿಡ್ನಂದಿ, ಬಸವರಾಜ ಹಿಡ್ಕಿಮಠ, ಎಸ್.ಆರ್. ಇಟಗಿ, ಪಿ.ಸಿ. ಹಿರೇಮಠ, ವಿ.ಎಂ. ಗುರುಮಠ, ಬಿ.ಜಿ. ಹಿರೇಮಠ, ಪರಶುರಾಮ ಹಡಪದ, ಕುಮಾರಸ್ವಾಮಿ ಹಿರೇಮಠ, ಎಲ್.ಎಂ. ನಿಡವಣಿ, ಪಂಚಾಕ್ಷರಿ ಹಿರೇಮಠ, ಎಂ.ಎನ್. ಕಿಂದ್ರಿ ಇದ್ದರು. ಕುಮಾರಸ್ವಾಮಿ ಹಿರೇಮಠ ಸ್ವಾಗತಿಸಿದರು. ಡಾ. ಆರ್.ಎಸ್.ದಾನರಡ್ಡಿ ನಿರೂಪಿಸಿ, ವಂದಿಸಿದರು.