ಇಂದು ಬಸವರಾಜೇಂದ್ರ ಸ್ವಾಮೀಜಿ ರಥೋತ್ಸವ
ರೋಣ: ಪಟ್ಟಣದ ಶಿವಾನಂದ ಮಠದ ಲಿಂಗೈಕ್ಯ ಬಸವರಾಜೇಂದ್ರ ಸ್ವಾಮಿಗಳ 62ನೇ ಪುಣ್ಯತಿಥಿ ಅಂಗವಾಗಿ ಜ. 30ರಂದು ಸಂಜೆ 6ಕ್ಕೆ ಬೃಹತ್ ರಥೋತ್ಸವ ಜರುಗಲಿದೆ. ರಥೋತ್ಸವ ನಿಮಿತ್ತ ಶುಕ್ರವಾರ ಬೆಳಗ್ಗೆ 10ಕ್ಕೆ ಶ್ರೀಮಠದ ಪೀಠಾಧಿಪತಿ ಶ್ರವಣ ಕುಮಾರ ಸ್ವಾಮೀಜಿ ಇವರ ತುಲಾಭಾರ ಕಾರ್ಯಕ್ರಮ ಜರುಗಲಿದೆ. ಹಾಗೂ ಜ. 31ರಿಂದ ಫೆ. 2ರ ವರೆಗೆ 3 ದಿನಗಳ ಕಾಲ ಮುಕ್ತ ಕುಸ್ತಿ ಸ್ಪರ್ಧೆ ಜರುಗಲಿದೆ. ಕುಸ್ತಿ ಪಟುಗಳು ಮುಂಗಡವಾಗಿ ತಮ್ಮ ಹೆಸರನ್ನು ನೋಂದಾಯಿಸಬೇಕು.
ಇಂದು ಹುತಾತ್ಮರ ದಿನಾಚರಣೆ
ಗದಗ: ಬೆಟಗೇರಿಯ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಜ. 30ರ ಬೆಳಗ್ಗೆ 10ಕ್ಕೆ ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿಯನ್ನು ಹುತಾತ್ಮರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಪ್ರಾಚಾರ್ಯೆ ವೈ.ಆರ್. ಹಿರೇಗೌಡರ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಗಣೇಶ ಸಿಂಗ್ ಬ್ಯಾಳಿ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಭಾವಚಿತ್ರ ಪೂಜೆ, ಸರ್ವಧರ್ಮ ಸಮನ್ವಯ ಪ್ರಾರ್ಥನೆ ಸೇರಿದಂತೆ ವಿವಿಧ ಧರ್ಮಗಳ ಗ್ರಂಥಪಠಣ ಮುಂತಾದ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕೌನ್ಸೆಲಿಂಗ್ ಮುಂದೂಡಿಕೆ
ಗದಗ: 29ರಂದು ಉಪನಿರ್ದೇಶಕರ ಕಚೇರಿ ಸಾರ್ವಜನಿಕ ಶಿಕ್ಷಣ ಇಲಾಖೆ ರೂ. 111, ಜಿಲ್ಲಾಡಳಿತ ಭವನ, ಗದಗದಲ್ಲಿ ಏರ್ಪಡಿಸಲಾಗಿದ್ದ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ ಮಾದರಿ ಶಾಲಾ ಪದವಿಧರೇತರ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಹಾಗೂ ಜ. 30ರಂದು ಸರ್ಕಾರಿ ಪದವಿಧರೇತರ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಮತ್ತು ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಕೌನ್ಸೆಲಿಂಗ್ ಮುಂದೂಡಲಾಗಿದೆ.