ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಕ್ಕಳ ಫಲಿತಾಂಶ ಉತ್ತಮಗೊಳ್ಳಲು ಅನುಸರಿಸುವ ಮಾಹಿತಿ ತಿಳಿದುಕೊಳ್ಳಿ

Lingaraj Badiger
Updated On : 31 Jan 2014, 11:14 am

ಲಕ್ಷ್ಮೇಶ್ವರ: ಶಿಕ್ಷಣಕ್ಕಾಗಿ ಸರ್ಕಾರ ಪ್ರತಿ ವರ್ಷ ಕೋಟ್ಯಂತರ ರು.ಗಳನ್ನು ಖರ್ಚು ಮಾಡುತ್ತಿದ್ದು, ಆ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳುವ ಕಾರ್ಯವನ್ನು ನಾವು ಮಾಡಬೇಕಾಗಿದೆ ಎಂದು ಗದಗ ಜಿಲ್ಲಾ ಪಂಚಾಯಿತಿಯ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡರ ಅಭಿಪ್ರಾಯಪಟ್ಟರು.
ಪಟ್ಟಣದ ರಂಭಾಪುರಿ ವೀರಗಂಗಾಧರ ಸಮುದಾಯ ಭವನದಲ್ಲಿ ಗುರುವಾರ ಲಕ್ಷ್ಮೇಶ್ವರ ಹೋಬಳಿ ಮಟ್ಟದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಅಧ್ಯಯನ ಕೌಶಲ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.  ಈ ಸಂದರ್ಭ ಶಿಕ್ಷಣಾಧಿಕಾರಿ ಆರ್.ಎಸ್. ಬುರುಡಿ ಮಾತನಾಡಿ, ತಾಲೂಕಿನ ಉತ್ತಮ ಫಲಿತಾಂಶಕ್ಕಾಗಿ ನಮ್ಮ ಶಿಕ್ಷಕರು ಹೆಚ್ಚಿನ ಶ್ರಮ ವಹಿಸುವಂತೆ ಗಮನ ನೀಡಬೇಕು. ಮಕ್ಕಳು ತಮ್ಮ ಫಲಿತಾಂಶ ಉತ್ತಮಗೊಳ್ಳಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಪಡೆದುಕೊಂಡು ನಿಮ್ಮ ಗುರಿಯನ್ನು ಹೆಚ್ಚು ಅಂಕಗಳನ್ನು ಪಡೆಯುವತ್ತ ಕೇಂದ್ರೀಕರಿಸಬೇಕು ಎಂದರು. ಈ ಸಂದರ್ಭ ಲಕ್ಷ್ಮೇಶ್ವರ ಹೋಬಳಿಯ 18 ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳು ಅಧ್ಯಯನ ಕೌಶಲ ತರಬೇತಿಯಲ್ಲಿ ಭಾಗವಹಿಸಿದ್ದರು. ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡಲು ಮೈಸೂರಿನ ರಾಜಾರಾಮ್ ಅವರು ಆಗಮಿಸಿದ್ದರು. ಪುರಸಭೆ ಅಧ್ಯಕ್ಷೆ ಗಂಗಮ್ಮ ಫಕ್ಕೀರಸ್ವಾಮಿಮಠ, ತಾಪಂ ಅಧ್ಯಕ್ಷೆ ಸುನಂದಮ್ಮ ಬಿದರಳ್ಳಿ, ಶಿಕ್ಷಣಾಧಿಕಾರಿಗಳಾದ ಕೆ.ಡಿ. ಬಡಿಗೇರ, ಎನ್.ಆರ್. ಸಾತಪುತೆ, ಬಿಆರ್‌ಸಿ ಜಯಶ್ರೀ ಗುಡಿ, ಕೆ.ಎ. ಬಳಿಗಾರ, ಆನಂದ ಮೆಕ್ಕಿ ಶಿರಹಟ್ಟಿ ತಾಲೂಕು ಮಾಧ್ಯಮಿಕ ಶಾಲೆ ನೌಕರ ಸಂಘದ ಅಧ್ಯಕ್ಷ ಎಂ.ಬಿ. ಹೊಸಮನಿ ಮೊದಲಾದವರು ಹಾಜರಿದ್ದರು. ಸಿಆರ್‌ಸಿ ಮಳ್ಳಿ ಸ್ವಾಗತಿಸಿದರು. ಮುಖ್ಯಾಧ್ಯಾಪಕ ರಮೇಶ ನವಲೆ ಕಾರ್ಯಕ್ರಮ ನಿರೂಪಿಸಿದರು. ಬಸವರಾಜ ಕನವಳ್ಳಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement