ನಾ. ಡಿಸೋಜಾ ಸೃಜನಶೀಲ ಸಾಹಿತ್ಯ ರಚಿಸಿದ ಸಾಹಿತಿ: ವಿನಾಯಕ ಕಮತದ
ಗದಗ: ಡಾ. ನಾ. ಡಿಸೋಜಾರ ಸಾಹಿತ್ಯದಲ್ಲಿ ಮಕ್ಕಳ ಸಾಹಿತ್ಯವೆ ಸಿಂಹಪಾಲು. ಸೃಜನಾತ್ಮಕ ಕಲ್ಪನೆ ವೈಭವಿಕರಿಸಿ ಸಹಜವಾಗಿ ಮಕ್ಕಳ ಹಾಗೂ ಜನ-ಮನ ಸೆಳೆಯುವ ಸ್ವಾಭಾವಿಕವಾದ ಮತ್ತು ಕುತೂಹಲ ಮೂಡಿಸುವ ಸೃಜನಶೀಲ ಸಾಹಿತ್ಯ ರಚಿಸಿದ ಕನ್ನಡನಾಡಿನ ಹೆಮ್ಮೆಯ ಸಾಹಿತಿ, ಕವಿ ಎಂದು ಹುಲಕೋಟಿಯ ಸರ್ಕಾರಿ ಪದವಿ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ವಿನಾಯಕ ಕಮತದ ಹೇಳಿದರು.
ಅವರು ತಾಪಂ ಆವರಣದಲ್ಲಿರುವ ಜಿಲ್ಲಾ ಕಸಾಪದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ನಾ. ಡಿಸೋಜಾ ಅವರ ಸಾಹಿತ್ಯದ ತಿರುಳು ಕುರಿತು ಉಪನ್ಯಾಸ ನೀಡಿದರು. ನಾ. ಡಿಸೋಜಾ ಅವರ ಗೋಪಿಯ ಗೊಂಬೆ, ಕಾಡಾನೆಯ ಕೊಲೆ, ಇರುವನೊಬ್ಬನೇ ಚಂದ್ರ ಇವು ಮಕ್ಕಳ ಮನಸ್ಸುನ್ನು ಅರಳಿಸುವ ಸಾಹಿತ್ಯವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿ, ನಾ. ಡಿಸೋಜಾ ಅವರದು ಶಿಶು ಸಾಹಿತ್ಯಕ್ಕೆ ಮೀಸಲಾದ ಸಾಹಿತ್ಯವಾಗಿದೆ ಎಂದರು. ಪ್ರೊ. ರಾಜಕುಮಾರ ತಳವಾರ ಸ್ವರಚಿತ ಕವನ ವಾಚಿಸಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶರಣು ಗೋಗೇರಿ, ಪ್ರಾ. ಕೆ.ಎಚ್. ಬೇಲೂರ, ತಾಲೂಕು ಅಧ್ಯಕ್ಷ ಕಿಶೋರಬಾಬು ನಾಗರಕಟ್ಟಿ, ಕಾರ್ಯದರ್ಶಿ ಶಶಿಕಾಂತ ಕೊರ್ಲಹಳ್ಳಿ, ಡಾ. ಅಶೋಕ ಮತ್ತಿಕಟ್ಟಿ, ಪಿ.ಕೆ. ಮೂಲಿಮಠ, ಶೋಭಾ ಶಲವಡಿ, ರೇಣುಕಾ ಬಣಕಾರ, ಜಯಶ್ರೀ ಅಂಗಡಿ, ಪ್ರಕಾಶ ಬಂಡಿ, ಜಿ.ಎಸ್. ಯತ್ನಟ್ಟಿ, ಆರ್.ಎನ್. ಸಜಗಾರ, ಶರಣಪ್ಪ ಬಾಲಣ್ಣವರ, ಮಲ್ಲಿಕಾರ್ಜುನ ಪೂಜಾರ, ಸಂಜೀವಸ್ವಾಮಿ ಮುಂತಾದವರು ಪಾಲ್ಗೊಂಡಿದ್ದರು. ಭಾಗ್ಯಶ್ರೀ ಘಳಗಿ ಪ್ರಾರ್ಥಿಸಿದರು. ಶಿಕ್ಷಕ ಸಂಘದ ಅಧ್ಯಕ್ಷ ಡಿ.ಎಸ್. ತಳವಾರ ಸ್ವಾಗತಿಸಿದರು. ಡಾ. ಸಂಗಮೇಶ ತಮ್ಮನಗೌಡ್ರ ನಿರೂಪಿಸಿದರು. ಗೌರವ ಕೋಶಾಧ್ಯಕ್ಷ ಮಲ್ಲೇಶ ಡಿ.ಎಚ್. ವಂದಿಸಿದರು.