ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನವೀನ ತಂತ್ರ ಬಳಕೆಯಿಂದ ಶೈಕ್ಷಣಿಕ ಪ್ರಗತಿ: ಬಡಿಗೇರ

Mainashree
Updated On : 3 Jul 2014, 9:07 am

ನರೇಗಲ್ಲ: ಸಿಸಿಇ ಒಂದು ನೂತನ ಪದ್ಧತಿಯಾಗಿದ್ದು, ಮಗುವಿನ ಎಲ್ಲ ಆಯಾಮಗಳನ್ನು ಮೌಲ್ಯಮಾಪನ ಮಾಡಬೇಕು. ಅದು ನಿರಂತರ ಮತ್ತು ವ್ಯಾಪಕವಾಗಿರಬೇಕು. ಮಕ್ಕಳಲ್ಲಿ ನವೀನ ತಂತ್ರಗಳನ್ನು ಬಳಸಿ ಶಿಕ್ಷಕರು ಪಾಠ ಬೋಧನೆಯಲ್ಲಿ ತೊಡಗಿದರೆ ಉತ್ತಮ ಶೈಕ್ಷಣಿಕ ಪ್ರಗತಿ ಕಾಣಲು ಸಾಧ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಕೆ.ಡಿ. ಬಡಿಗೇರ ಹೇಳಿದರು.
ಅವರು ಸ್ಥಳೀಯ ಎಸ್.ಕೆ.ಆರ್.ಕೆ. ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ಆಯೋಜಿಸಿದ 10ನೇ ತರಗತಿ  ನೂತನ ಪಠ್ಯಪುಸ್ತಕ ಕುರಿತು ಕನ್ನಡ ಭಾಷಾ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ 3 ದಿನಗಳ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಕನ್ನಡ ಭಾಷಾ ವಿಷಯ ಕಲಿಸುವ ಶಿಕ್ಷಕರಿಗೆ ಸಂಗೀತ ಜ್ಞಾನ ಅಗತ್ಯ, ಪದ್ಯಗಳನ್ನು ಹಾಡಿದಾಗಲೇ ಅದಕ್ಕೊಂದು ಭಾವ ಬರುತ್ತದೆ. ಶಬರಿ ಗೀತ ನಾಟಕವಾಗಿದ್ದು, ಶಿಕ್ಷಕರು ಭಾವಾಭಿನಯದ ಮೂಲಕ ಕಲಿಸಬೇಕು. ಜತೆಗೆ ಸಾಹಿತ್ಯದ ಆಳವಾದ ಜ್ಞಾನವನ್ನು ಪಡೆಯಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರೋಣ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಐ. ಅಸುಂಡಿ ಮಾತನಾಡಿ, ಈ ಕಾರ್ಯಾಗಾರದಲ್ಲಿ ಪರಾಮರ್ಶೆಗೊಂಡ ವಿಷಯವನ್ನು ನಿಮ್ಮ ತರಗತಿಯಲ್ಲಿ ಮಕ್ಕಳಿಗೆ ಸಮರ್ಪಕ ರೀತಿಯಲ್ಲಿ ಮನದಟ್ಟಾಗುವಂತೆ ಉಣಬಡಿಸಿದಲ್ಲಿ ಕಾರ್ಯಾಗಾರಗಳಿಗೆ ಅರ್ಥ ಬರುತ್ತದೆ. ಪ್ರತಿ ವರ್ಷ ಶೈಕ್ಷಣಿಕ ಮಧ್ಯ ಅಥವಾ ಕೊನೆಯಲ್ಲಿ ನಡೆಸುವುದರಿಂದ ವಿದ್ಯಾರ್ಥಿಗಳ ಮನದಾಳದಲ್ಲಿ ಉಳಿಯದಿರುವ ದೃಷ್ಟಿಕೋನದಿಂದ ಈ ವರ್ಷ ಪ್ರಾರಂಭದಲ್ಲಿ ನಡೆಸಿರುವುದು ವಿಶೇಷವಾಗಿದೆ ಎಂದರು. ವಿಷಯ ಪರಿವೀಕ್ಷಕ ಕೆ.ಪಿ. ಸಾಲಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಡಿ. ದಾಸರ, ಶಿಕ್ಷಣ ಸಂಯೋಜಕ ಪಿ.ಎಸ್. ಕಡಿವಾಲ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಾರ್ಯಾಗಾರದ ಯಶಸ್ಸಿಗೆ ಕಾರಣರಾದ ನಿವೃತ್ತ ಶಿಕ್ಷಕ ವಿ.ಕೆ. ಪಾಟೀಲ, ಎಸ್.ಕೆ. ಕುರ್ಲಗೇರಿ, ಎ.ಎಸ್. ಬೆನಕನವಾರಿ ಹಾಗೂ ಎಸ್.ಬಿ. ನಿಡಗುಂದಿ ಅವರನ್ನು ಸನ್ಮಾನಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಿಗೆ ಅಭಿನಂದನಾ ಪತ್ರ ವಿತರಿಸಲಾಯಿತು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕಿ ಎಸ್.ಎಸ್. ಚುಂಚಾ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement