ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪರಸ್ಪರ ವಿಶ್ವಾಸದಿಂದ ಸಹಕಾರಿ ರಂಗದ ಏಳ್ಗೆ

Mainashree
Updated On : 3 Jul 2014, 9:07 am

ಲಕ್ಷ್ಮೇಶ್ವರ:  ಅಭಿವೃದ್ಧಿ ಹೊಂದಲು ಸಹಕಾರ ಅಗತ್ಯವಾಗಿದೆ. ಸಮಾಜದ ಅಭಿವೃದ್ಧಿಗೆ ನಮ್ಮೆಲ್ಲರ ಸಹಕಾರ, ವಿಶ್ವಾಸ ಬೇಕಾಗಿದೆ ಎಂದು ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಪಂಚಮಸಾಲಿ ಕೋ ಆಫ್ ಕ್ರೆಡಿಟ್ ಸೊಸೈಟಿ ಉದ್ಘಾಟಿಸಿ ಅವರು ಮಾತನಾಡಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದುವರಿವುದು ಅವಶ್ಯವಾಗಿದೆ ಎಂದರು.
ಡಾ. ವೈ.ಎಫ್. ಹಂಜಿ, ಶಕುಂತಲಾ ಹೊರಟ್ಟಿ, ಸೋಮಣ್ಣ ಮುಳಗುಂದ ಮೊದಲಾದವರು ಮಾತನಾಡಿದರು. ಇದೆ ಸಂದರ್ಭದಲ್ಲಿ ವಿಜಯಕುಮಾರ್ ಗಡ್ಡಿ ಪಿಗ್ಮಿ ಕಾರ್ಡ್‌ಗಳನ್ನು ವಿತರಿಸಿದರು. ನಿವೃತ್ತ ಉಪನ್ಯಾಸಕ ಎನ್.ಎಸ್. ಪಾಟೀಲ ಸಾಲದ ಚೆಕ್ ನೀಡಿದರು. ಬ್ಯಾಂಕಿನ ಅಧ್ಯಕ್ಷ ಎಸ್.ಪಿ. ಪಾಟೀಲ ಠೇವಣಿ ಸರ್ಟಿಫಿಕೇಟ್‌ಗಳನ್ನು ವಿತರಿಸಿದರು.
ವೀರಣ್ಣ ಹತ್ತಿಕಾಳ, ದೇವೇಂದ್ರಪ್ಪ ಪಲ್ಲೇದ, ಬಸಣ್ಣ ಹೊಸೂರ, ಚಂದ್ರಶೇಖರ ಕುಲಕರ್ಣಿ, ಬ್ಯಾಂಕಿನ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಬಾಳಿಕಾಯಿ, ಶಿವಪ್ಪ ಬಂಗಿ, ಮಹಾದೇವಿ ಒಣರೊಟ್ಟಿ, ಫಕ್ಕೀರೇಶ ಕಲ್ಯಾಣಿ, ಫಕ್ಕೀರಪ್ಪ ಅಣ್ಣಿಗೇರಿ, ಕುಬೇರಪ್ಪ ಮಹಾಂತಶೆಟ್ಟರ, ನಾಗಪ್ಪ ಶಿರಬಡಗಿ, ಸುರೇಶ ರಾಚನಾಯಕರ, ಬಸವಣ್ಣೆಪ್ಪ ರೊಳ್ಳಿ, ಎನ್.ಪಿ. ಪಾಟೀಲ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement