ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರಸ್ತೆ ಮೇಲೆ ಕೊಳಚೆ: ಗಜೇಂದ್ರಗಡ ಪುರಸಭೆ ವಿರುದ್ಧ ನಾಗರಿಕರ ಪ್ರತಿಭಟನೆ

Mainashree
Updated On : 3 Jul 2014, 9:07 am

ಗಜೇಂದ್ರಗಡ: ಸ್ಥಳೀಯ ಪುರಸಭೆ ವ್ಯಾಪ್ತಿಯ ಕಲ್ಗುಡಿಯವರ ಪ್ಲಾಟ್‌ನಲ್ಲಿ ರಸ್ತೆ ಮೇಲೆ ಕೊಳಚೆ ಹರಿದು ದುರ್ನಾತ ಬರುತ್ತಿದ್ದು, ರೊಚ್ಚಿಗೆದ್ದ ಬಡಾವಣೆ ನಿವಾಸಿಗಳು ಪುರಸಭೆ ಆಡಳಿತ ವಿರುದ್ಧ ಬುಧವಾರ ಪ್ರತಿಭಟನೆ ನಡೆಸಿದರು.
ಪುರಸಭೆ ಕಚೇರಿ ಸಮೀಪವಿರುವ ಕಲ್ಗುಡಿಯವರ ಪ್ಲಾಟ್‌ನಲ್ಲಿ ನೂರಕ್ಕೂ ಹೆಚ್ಚು ಮನೆಗಳಿದ್ದು, ಬೀದಿಗಳು ಗಬ್ಬೆದ್ದು ನಾರುತ್ತಿದೆ. ಜನ, ವಾಹನಗಳು ಕೊಳಚೆ ತುಳಿದು ಸಂಚರಿಸುವ ದುಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಶಾಶ್ವತ ಪರಿಹಾರ ನೀಡುವ ಅಧಿಕಾರಿಗಳು ಜವಾಬ್ದಾರಿಯಿಂದ ನುಣಚಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಬಡಾವಣೆಯಲ್ಲಿ ಅಭಿವೃದ್ಧಿ ಮರಿಚಿಕೆಯಾಗಿದೆ ಎಂದು ನಿವಾಸಿಗಳು ದೂರಿದರು.  ಪಟ್ಟಣದ ಎಲ್ಲ ವಾರ್ಡ್‌ನಲ್ಲಿ ಸಿಮೆಂಟ್ ರಸ್ತೆ, ಚರಂಡಿ ಸೇರಿದಂತೆ ಅಲ್ಪ ಸ್ವಲ್ಪ ಮೂಲ ಸೌಲಭ್ಯ ಕಂಡಿವೆ. ಆದರೆ ಸ್ಥಳೀಯ ಆಡಳಿತ ಈ ಬಡಾವಣೆಯ ಅಭಿವೃದ್ಧಿಗೆ ಯಾಕೆ ಮುಂದಾಗುತ್ತಿಲ್ಲ. ಬಡಾವಣೆಗೆ ಮೂಲ ಸೌಲಭ್ಯ ಒದಗಿಸುವಂತೆ 10 ವರ್ಷದಿಂದಲೂ ಪುರಸಭೆಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಜನ ಅಪಾದಿಸಿದರು. ಗಲೀಜು ರಸ್ತೆ ಮೇಲೆ ನಿಂತು ಸಾಂಕ್ರಾಮಿಕ ರೋಗಗಳ ತಾಣವಾಗಿ ಮಾರ್ಪಟ್ಟು ಜನರ ಆರೋಗ್ಯಕ್ಕೂ ಕುತ್ತು ಎದುರಾಗಿದೆ.  
ಇನ್ನಾದರೂ ಮುಂಜಾಗ್ರತೆ ವಹಿಸಲು ಮುಂದಾಗದಿದ್ದರೆ ಸ್ಥಳೀಯ ಆಡಳಿತ ವಿರುದ್ಧ ಪುರಸಭೆಗೆ ಬೀಗ ಜಡಿದು ಉಗ್ರ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುರೇಶ ಶಿರೋಳ, ರಜಾಕಸಾಬ್ ಅರಳಿಕಟ್ಟಿ, ಅರುಣ ಕುಂದರಗಿ, ನಾಗರಾಜ ಕಲ್ಗುಡಿ, ಮೂಕಪ್ಪ ಗುಡೂರ, ತಿರುಪತಿ ಕಲ್ಲೋಡ್ಡರ, ಗಣಪತಸಾ ರಾಯಬಾಗಿ,  ವಿಶ್ವನಾಥಸಾ ರಾಜೋಳ್ಳಿ,  ಲಕ್ಷ್ಮೀಬಾಯಿ ರಾಜೋಳ್ಳಿ, ಚಿಂತಪ್ಪ ಯಂಕಂಚಿ, ಸುವರ್ಣಾ ದಾಸರ, ಬಸಮ್ಮ ಕಲ್ಲೋಡ್ಡರ, ರೇಣಮ್ಮ ಗುಡೂರ, ತಿಪ್ಪಣ್ಣ ಬಂಕದ, ಯಮನೂರಪ್ಪ ಲಕ್ಕಲಕಟ್ಟಿ, ನೇಮಾಸಾ ರಾಜೋಳ್ಳಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement