ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವನಮಹೋತ್ಸವ ಕಾರ್ಯಕ್ರಮ

Mainashree
Updated On : 3 Jul 2014, 9:07 am

ಕನ್ನಡಪ್ರಭ ವಾರ್ತೆ, ಗದಗ, ಜು. 2
ವನಮಹೋತ್ಸವ ಸಪ್ತಾಹದ ಅಂಗವಾಗಿ ಮೊದಲ ದಿನವಾದ ಮಂಗಳವಾರ ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಲಯನ್ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ನಗರದ ಶಾಲಾ ಮಕ್ಕಳಲ್ಲಿ ಗಿಡ, ಮರ, ಪ್ರಾಣಿ, ಪಕ್ಷಿಗಳ ಬಗ್ಗೆ ಆಸಕ್ತಿ ಮೂಡಿಸುವ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳು ಜರುದವು.
ಜು. 2ರಿಂದ ಜು. 7ರ ವರೆಗೆ ಜರುಗಲಿರುವ ಸಪ್ತಾಹದ ಭಾಗವಾಗಿ ಗಾಂಧಿ ವೃತ್ತದಿಂದ ಬಿಂಕದಕಟ್ಟಿ ಕಿರು ಮೃಗಾಲಯದವರೆಗೆ ಮಕ್ಕಳಿಗೆ ಸೈಕಲ್ ಜಾಥಾ ಏರ್ಪಡಿಸಲಾಗಿತ್ತು. ಡಿಎಸ್‌ಪಿ ವಿಜಯ ಡಂಬಳ ಮಕ್ಕಳ ಸೈಕಲ್ ಜಾಥಾಕ್ಕೆ ಚಾಲನೆ ನೀಡಿದರು.
ಚಿತ್ರಕಲೆ ಸ್ಪರ್ಧೆ: ಸೈಕಲ್ ಜಾಥಾ ಬಿಂಕದಕಟ್ಟೆ ಕಿರು ಮೃಗಾಲಯದಲ್ಲಿ ಕೊನೆಗೊಂಡ ನಂತರ ಮಕ್ಕಳಿಗಾಗಿ ಸ್ಥಳದಲ್ಲೆ ಚಿತ್ರ ರಚಿಸುವ, ಚಿತ್ರಗಳಿಗೆ ಬಣ್ಣ ತುಂಬುವ ಸ್ಪರ್ಧೆ ಹಾಗೂ ಕಿರು ಮೃಗಾಲಯದ ಹೊರಗೋಡೆಯಲ್ಲಿ ಚಿತ್ರಿಸಿರುವ ವಿವಿಧ ವನ್ಯಪ್ರಾಣಿಗಳನ್ನು ಗುರುತಿಸುವ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ನಗರದ ವಿವಿಧ ಶಾಲೆಗಳ ಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಉಪಅರಣ್ಯ ಸಂರಕ್ಷಣಾಧಿಕಾರಿ ಡಿ.ಎನ್. ಅಘೋರೆ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಐ.ಬಿ.ಬೆನಕೊಪ್ಪ, ಲಯನ್ಸ್ ಕ್ಲಬ್ ಮಾಜಿ ಗವರ್ನರ್ ಆನಂದ ಪೋತ್ನಿಸ್, ಅಧ್ಯಕ್ಷ ವಿ.ಎಚ್.ಡಂಬಳ, ಕಾರ್ಯದರ್ಶಿ ಶಿವಕುಮಾರ ಪಾಟೀಲ, ನಗರದ ಸಂಚಾರಿ ಪೊಲೀಸ್ ಠಾಣೆಯ ಪಿ.ಎಸ್.ಐ. ಶಿವಾನಂದ ಆನೇವಾಡ, ವಲಯ ಅರಣ್ಯಾಧಿಕಾರಿ ಬೀಳಗಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement