ಸ್ವಉದ್ಯೋಗ ಸ್ವಾವಲಂಬನೆಗೆ ದಾರಿ
ರೋಣ: ಮಹಿಳೆಯರು ಸ್ವಾವಲಂಭನೆಯ ಬದುಕಿಗೆ ಸ್ವ-ಉದ್ಯೋಗ ದಾರಿಯಾಗಲಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೈ.ಕ ಪ್ರಾದೇಶಿಕ ವಿಭಾಗದ ನಿರ್ದೇಶಕ ಕೆ. ಬೂದಪ್ಪಗೌಡ್ರ ಹೇಳಿದರು.
ಅವರು ಬುಧವಾರ ಪಟ್ಟಣದ ಧರ್ಮಾಯತ ಮಳಿಗೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಿರಿ ಸಂಸ್ಥೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಬೆಳ್ತಂಗಡಿ ಇವುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ಸಿರಿ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪುರಸಭೆ ಅದ್ಯಕ್ಷ ಮುತ್ತಣ್ಣ ಸಂಗಲದ ಮಾತನಾಡಿದರು. ಧ.ಗ್ರಾ. ಯೋಜನಾ ಜಿಲ್ಲಾ ನಿರ್ದೇಶಕ ಜಯಂತ ಪೂಜಾರಿ, ವಿ.ಬಿ. ಸೋಮನಕಟ್ಟಿಮಠ, ಶಿವರಡ್ಡಿ ದಾನರಡ್ಡಿ, ಶಶಿಧರ ಧರ್ಮಾಯತ, ಭೀಮರಡ್ಡಿ ದಾನರಡ್ಡಿ, ಕೆಂಚಪ್ಪ ಗಡಗಿ ಉಪಸ್ಥಿತರಿದ್ದರು. ಸುನೀತಾ ಪವಾರ ಸ್ವಾಗತಿಸಿದರು. ಉಮೇಶ ನಿರ್ವಹಿಸಿದರು. ತಾಲೂಕು ನಿರ್ದೇಶಕ ಟಿ. ಕೃಷ್ಣಾ ವಂದಿಸಿದರು.