ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬೆಳೆವಿಮೆ: ಅಂತಿಮ ದಿನದವರೆಗೂ ಕಾಯುವುದು ಬೇಡ

Mainashree
Updated On : 4 Jul 2014, 9:14 am

ಗದಗ: ಜಿಲ್ಲೆಯಲ್ಲಿ 2014-15ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ ರೈತರು ಬೆಳೆ ವಿಮೆ ಪ್ರಸ್ತಾವನೆಗಳನ್ನು ಬ್ಯಾಂಕುಗಳಿಗೆ, ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಸಲ್ಲಿಸಲು ಜೂನ್ 30 ಕೊನೆಯ ದಿನಾಂಕವೆಂದು ನಿಗದಿಪಡಿಸಲಾಗಿತ್ತು. ಇತ್ತೀಚೆಗೆ ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ ವಿಮಾ ಪ್ರಸ್ತಾವನೆ ಸಲ್ಲಿಸುವ ಕೊನೆಯ ದಿನಾಂಕವನ್ನು ಜು. 31ರ ವರೆಗೆ ವಿಸ್ತರಿಸಲಾಗಿದೆ. ಕಾರಣ ಜಿಲ್ಲೆಯ ರೈತರು ವಿಸ್ತರಿಸಿದ ಅವಧಿಯಲ್ಲಿ ವಿಮಾ ಯೋಜನೆಯಡಿ ಭಾಗವಹಿಸಿ ಪ್ರಸ್ತಾವನೆ ಸಲ್ಲಿಸಲು ಕೋರಲಾಗಿದೆ. ರೈತರು ಬೆಳೆ ಪ್ರಸ್ತಾವನೆಯೊಂದಿಗೆ ತಮ್ಮ ಜಮೀನಿಗೆ ಸಂಬಂಧಿಸಿದ ಪಹಣಿಯನ್ನು ಲಗತ್ತಿಸಿ ವಿಮಾ ಪ್ರಸ್ತಾವನೆ ಸಲ್ಲಿಸಬಹುದು. ಅಲ್ಲದೇ ಈ ಹಿಂದಿನ ವರ್ಷಗಳಲ್ಲಿ ರೈತರು ಬೆಳೆ ವಿಮೆ ಪ್ರಸ್ತಾವನೆ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದೇ ಹೆಚ್ಚಿನ ಸಂಖ್ಯೆಯ ರೈತರು ಬ್ಯಾಂಕಿಗೆ ತೆರಳುವುದು ಕಂಡುಬರುತ್ತದೆ. ಇದರಿಂದಾಗಿ ಬ್ಯಾಂಕುಗಳಲ್ಲಿ ವಿಮೆ ಮಾಡಿಸುವಾಗ ಅನಗತ್ಯ ಒತ್ತಡ, ಗದ್ದಲ ಉಂಟಾಗುವುದು ಬೇಡ. ಕಾರಣ ಜಿಲ್ಲೆಯ ರೈತರು ಬೆಳೆ ವಿಮಾ ಪ್ರಸ್ತಾವನೆ ಸಲ್ಲಿಸುವ ಅಂತಿಮ ದಿನದಂದೇ ಬ್ಯಾಂಕುಗಳಿಗೆ ತೆರಳದೇ ಇಂದಿನಿಂದಲೇ ಬೆಳೆ ವಿಮೆ ಅರ್ಜಿ ಮತ್ತು ಪಹಣಿಯೊಂದಿಗೆ ಬ್ಯಾಂಕುಗಳಿಗೆ ತೆರಳಿ ವಿಮೆ ಪ್ರಸ್ತಾವನೆ ಸಲ್ಲಿಸಲು ಕೋರಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement