ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಳೆಗಾಗಿ ಕತ್ತೆ ಮದುವೆ

Mainashree
Updated On : 5 Jul 2014, 10:00 am

ಗಜೇಂದ್ರಗಡ:  ಸ್ಥಳೀಯ ಜಗಜ್ಯೋತಿ ಬಸವೇಶ್ವರ ಕೃಷಿ ಉಪಮಾರುಕಟ್ಟೆ ಪ್ರಾಂಗಣದ ಗಣಪತಿ ದೇಗುಲದಲ್ಲಿ ವರ್ತಕರು, ರೈತರು, ಶ್ರಮಿಕರು, ಕಾರಕೂನರು ಶುಕ್ರವಾರ ಕತ್ತೆಗಳಿಗೆ ಮದುವೆ ಮಾಡಿ ಮಳೆಗಾಗಿ ಸಾಮೂಹಿಕ ಪ್ರಾರ್ಥಿಸಿದರು.
ಬೆಳಗ್ಗೆ ಗಂಡು ಮತ್ತು ಹೆಣ್ಣು ಕತ್ತೆಯನ್ನ್ನು ತರಲಾಗಿತ್ತು. ದಪ್ಪಗೆ ಇದ್ದವರು ಹೆಣ್ಣು ಕತ್ತೆ ಪರವಾಗಿ ಮತ್ತು ತೆಳ್ಳಗೆ ಇದ್ದವರು ಹೆಣ್ಣಿನ ಪರವಾಗಿ ಧಾರ್ಮಿಕ ವಿಧಿ- ವಿಧಾನಗಳ ಮೂಲಕ ಲಗ್ನ್ನ ಮಾಡಿದರು, ಬಳಿಕ ಕೃಷಿ ಉತ್ಪನ್ನ್ನ ಮಾರುಕಟ್ಟೆಯಿಂದ ಶ್ರೀ ಕಾಲಕಾಲೇಶ್ವರ ವೃತ್ತ, ಜೋಡು ರಸ್ತೆ, ಶ್ರೀ ದುರ್ಗಾ ವೃತ್ತದ ಮೂಲಕ  ವಧು ವರರನ್ನ್ನು ಭವ್ಯ ಮೆರವಣಿಗೆಯೊಂದಿಗೆ ಶ್ರೀ ದಂಡಿನ ದುರ್ಗಾದೇವಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಕೃಷಿ ಉತ್ಪನ್ನ್ನ ಮಾರುಕಟ್ಟೆಯಲ್ಲಿ ಸಾಮೂಹಿಕ ಅನ್ನಸಂತರ್ಪಣೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಗಜ್ಯೋತಿ ಬಸವೇಶ್ವರ ಕೃಷಿ ಉಪಮಾರುಕಟ್ಟೆ ದಲಾಲ ವರ್ತಕರ ಸಂಘ ಅಧ್ಯಕ್ಷ ಅಮರೇಶ ಬಳಿಗೇರ, ಸುಭಾಸ ಮ್ಯಾಗೇರಿ, ಸಿ.ಎಸ್ ವಾಲಿ, ಕಳಕಪ್ಪ ಗುಳೇದ, ಯಲ್ಲಪ್ಪ ಕದಡಿ, ಹನುಮಪ್ಪ ಹೆಳವರ, ಪ್ರಕಾಶ ಕಾಡಗಿ, ಶ್ರೀಕಾಂತ ಡೊಳ್ಳಿನ, ದಾವಲಸಾಬ ಹಿರೇಮನಿ, ಎ.ಜಿ. ಸಂಗಳದ, ಬಸವರಾಜ ಕುಷ್ಟಗಿ, ಈಶಪ್ಪ ಪುರ್ತಗೇರಿ, ಬಿ. ವೈ. ಲಿಂಬೋಜಿ, ಸುರೇಶ ವದೇಗೊಳ, ಮಹೇಶ ಸಂಕನೂರ, ದುರುಗಪ್ಪ ಆಬಾನವರ ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement