ಎಪಿಎಂಸಿಯಲ್ಲಿ ಕಳಪೆ ಕಾಮಗಾರಿ: ಆಕ್ರೋಶ
ನರಗುಂದ: ಪಟ್ಟಣದ ಎಪಿಎಂಸಿಯಲ್ಲಿ 1.36 ಕೋಟಿ ವೆಚ್ಚದಲ್ಲಿ ನಡೆದ ರಸ್ತೆ, ಚರಂಡಿ, ಕಾಂಪೌಂಡ್, ಕ್ಯಾಂಟೀನ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿವೆ ಎಂದು ಆಕ್ರೋಶ ವ್ಯಕ್ತ ಪಡಿಸಿ, ಶುಕ್ರವಾರ ವರ್ತಕರು ಎಪಿಎಂಸಿಯ ಕಾರ್ಯದರ್ಶಿ ಜೆ.ಎ. ಬುರಡಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಎಪಿಎಂಸಿಗೆ ಆವರಣದಲ್ಲಿ ನಡೆದ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿ ನಂತರ ಕಚೇರಿ ಆವರಣದಲ್ಲಿ ಕಾರ್ಯದರ್ಶಿ ಕರೆಯಿಸಿ ಸದ್ಯ ನಡೆದಿರುವ ಎಲ್ಲ ಕಾಮಗಾರಿಳನ್ನು ಗುತ್ತಿಗೆದಾರರು ಮತ್ತು ನೀವು ಸೇರಿ ಸಂಪೂರ್ಣ ಕಳಪೆ ಮಾಡಿದ್ದೀರಿ, ಕಾಮಗಾರಿ ನಡೆಯುವ ಸಂದರ್ಭದಲ್ಲಿ ನೀವೇಕೆ ಸೂಚನೆ ನೀಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯದರ್ಶಿ ಮಾತನಾಡಿ, ಈ ಬಗ್ಗೆ ಈ ಅಭಿವೃದ್ಧಿ ಕಾರ್ಯಗಳು ನಡೆದ ಸಂದರ್ರ್ಭದಲ್ಲಿ ಇಲಾಖೆಯ ನೇಮಿಸಿರುವ ಎಂಜಿನಿಯರ್ಗಳು ಕಾಮಗಾರಿ ಪರೀಶಿಲನೆ ಮಾಡಿದ್ದಾರೆ.
ಮತ್ತೊಮ್ಮೆ ತನಿಖೆ ನಡೆಸಿ, ತಪ್ಪುಗಳು ಕಂಡು ಬಂದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು. ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಹುಡೇದ, ತಾಲೂಕು ವರ್ತಕರ ಸಂಘದ ಅಧ್ಯಕ್ಷ ಎ.ಪಿ. ಪಾಟೀಲ, ಉಪಾಧ್ಯಕ್ಷ ವೀರಣ್ಣ ವಡ್ಡಿಗೇರಿ, ಸಿ.ಎಚ್. ಕೋರಿ, ಜಿ.ಟಿ. ಗುಡಿಸಾಗರ, ರಮೇಶಗೌಡ ಕರಕನಗೌಡ್ರ, ವೀರೇಶ ಬೋನಗೇರ, ಸುರೇಶ ಚೋಪ್ರ, ಬಿ.ಎಸ್. ಅಂಗಡಿ, ವಾಸಣ್ಣ ಬೋನಗೇರ ಮುಂತಾದವರು ಹಾಜರಿದ್ದರು.