ಪಿಒಪಿ ಗಣೇಶ ವಿಗ್ರಹ ನಿಷೇಧಿಸಿ
ಗದಗ: ಪರಿಸರಕ್ಕೆ ಮಾರಕವಾಗುವ ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ವಿಗ್ರಹಗಳ ತಯಾರಿಕೆ ಹಾಗೂ ಮಾರಾಟವನ್ನು ಜಿಲ್ಲೆಯಲ್ಲಿ ಕಡ್ಡಾಯವಾಗಿ ನಿಷೇಧಿಸುವಂತೆ ಆಗ್ರಹಿಸಿ ಜಿಲ್ಲಾ ಮೂರ್ತಿ ತಯಾರಕರ ಸಂಘ ಹಾಗೂ ಕುಂಬಾರ ಕ್ಷೇಮಾಭಿವೃದ್ಧ ಸಂಘದ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮೂರ್ತಿ ತಯಾರಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಅಣ್ಣಿಗೇರಿ ಮಾತನಾಡಿ, ಪರಿಸರಕ್ಕೆ ಹಾನಿಯನ್ನುಂಟು ಮಾಡುವ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ವಿಗ್ರಹಗಳನ್ನು ತಯಾರಿಸದಂತೆ ಹಾಗೂ ಮಾರಾಟ ಮಾಡದಂತೆ ಆದೇಶ ಹೊರಡಿಸುವಂತೆ ಕೋರಿ ಪ್ರತಿವರ್ಷ ಜಿಲ್ಲಾಧಿಕಾರಿಗಳೂ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ. ಆದರೆ ಈ ಅಧಿಕಾರಿಗಳು ಮಾತ್ರ ನಮ್ಮ ಮನವಿಗೆ ಸ್ಪಂದಿಸುವ ಸೌಜನ್ಯವನ್ನು ತೋರುವುದಿಲ್ಲ. ಪಿಒಪಿ ಮೂರ್ತಿ ತಯಾರಕರಿಗೆ ಕಾಟಾಚಾರಕ್ಕೆ ನೋಟಿಸ್ ನೀಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆಂದು ಆರೋಪಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುತ್ತಣ್ಣ ಭರಡಿ, ಶ್ರೀರಾಮ ಸೇನೆಯ ಜಿಲ್ಲಾ ಸಂಚಾಲಕ ರಾಜು ಖಾನಪ್ಪನವರ, ಸುರೇಶ ಹಾದಿಮನಿ, ಬಾಬಣ್ಣ ನರಗುಂದ, ರಾಚಪ್ಪ ಕುಂಬಾರ, ಸೋಮನಾಥ ಕುಂಬಾರ, ಮಂಜುನಾಥ ಕುಂಬಾರ, ರಾಜೀವ ಕುಂಬಾರ, ಮುರಳಿಧರ ಭಂಡಾರಿ, ಪ್ರಕಾಶ ಕುಂಬಾರ, ಸುರೇಶ ಚಿತ್ರಗಾರ, ಹನುಮಂತಪ್ಪ ಜೀನಗಾರ, ಶರಣಪ್ಪ ಅಕ್ಕಿ, ಈರಣ್ಣ ಕಮ್ಮಾರ, ಪ್ರವೀಣ ಕಾಂಬಳೆ, ದೀಪಕ ಚಿತ್ರಗಾರ, ಅಚ್ಯುತ್ ಬೆಂತೂರ, ಬಸವರಾಜ ಚಕ್ರಸಾಲಿ, ಯಮುನಾಜಿ ಭಾಸ್ಕರ, ಗವಿಸಿದ್ದಯ್ಯ ಹಳ್ಳಿಕೇರಿಮಠ, ವಿ.ಆರ್. ಕುಂಬಾರ, ಫಕೀರಪ್ಪ ಕುಂಬಾರ, ಕಲ್ಲಪ್ಪ ಕಡದಳ್ಳಿ, ಪರಪ್ಪ ಕುಂಬಾರ, ಹನುಮಂತಪ್ಪ ಕುಂಬಾರ, ಚನ್ನಪ್ಪ ಕುಂಬಾರ ಇದ್ದರು.