ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ
ಕನ್ನಡಪ್ರಭ ವಾರ್ತೆ, ಮುಂಡರಗಿ, ಜು. 8
ರೈಲ್ವೆ ಬಜೆಟ್‌ನಲ್ಲಿ ಸಚಿವ ಸದಾನಂದಗೌಡರು ಗದಗ-ಮುಂಡರಗಿ-ಹರಪ್ಪನಹಳ್ಳಿ ರೈಲು ಮಾರ್ಗ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಮುಂಡರಗಿಯ ನೂತನ ಬಸ್ ನಿಲ್ದಾಣದ ಹತ್ತಿರ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿಹಂಚಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಕರಬಸಪ್ಪ ಹಂಚಿನಾಳ ಮಾತನಾಡಿ, ಅನೇಕ ವರ್ಷಗಳಿಂದ ಈ ಭಾಗದಲ್ಲಿ ರೈಲ್ವೆ ಹೋರಾಟ ನಿರಂತರವಾಗಿ ನಡೆಯುತ್ತಾ ಬಂದಿತ್ತು. ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ನಮ್ಮ ಸಂಸದ ಶಿವಕುಮಾರ ಉದಾಸಿಯವರೂ ರೈಲ್ವೆ ಸಚಿವರಿಗೆ ಮನವಿ ಅರ್ಪಿಸಿದ್ದರು. ರೈಲ್ವೆ ಬಜೆಟ್‌ನಲ್ಲಿ ಡಿ.ವಿ. ಸದಾನಂದಗೌಡರು ನೂತನ ಮಾರ್ಗವನ್ನು ಮಂಜೂರು ಮಾಡುವ ಮೂಲಕ ಈ ಭಾಗದ ಜನರ ಅನೇಕ ವರ್ಷಗಳ ಬೇಡಿಕೆ ಈಡೇರಿದಂತಾಗಿದೆ. ಅವರಿಗೆ ಬಿಜೆಪಿ ಎಲ್ಲ ಕಾರ್ಯಕರ್ತರ ಪರವಾಗಿ ಅಭಿನಂದಿಸುತ್ತೇನೆ ಎಂದರು.
ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ ಮಾತನಾಡಿದರು. ಎಸ್.ವಿ. ಪಾಟೀಲ, ರಜನೀಕಾಂತ ದೇಸಾಯಿ, ಆರ್.ಎಂ. ತಪ್ಪಡಿ, ದೇವಪ್ಪ ಕಂಬಳಿ, ಶಿವನಗೌಡ ಗೌಡ್ರ, ಪ್ರಭು ಅಬ್ಬಿಗೇರಿ, ಶ್ರೀನಿವಾಸ ಅಬ್ಬಿಗೇರಿ, ಮೋಹನ್ ದೇಸಾಯಿ, ಶಂಕರಗೌಡ ಪಾಟೀಲ, ಪರಶುರಾಮ ಕರಡಿಕೊಳ್ಳ, ಸುರೇಶ ಮಾಳೆಕೊಪ್ಪ, ಬಸವರಾಜ ಸಸಿಮಠ, ದೇವಪ್ಪ ಇಟಗಿ, ಟಿ.ಡಿ. ದಂಡಿನ, ಶಿವು ನಾಡಗೌಡ್ರ, ವಿ.ಎಸ್. ಘಟ್ಟಿ, ರವೀಂದ್ರಗೌಡ ಪಾಟೀಲ, ಮಹಾದೇವಪ್ಪ ಬಳ್ಳಾರಿ, ಚಿನ್ನಪ್ಪ ವಡ್ಡಟ್ಟಿ, ಬಿ.ಕೆ. ಪಾಟೀಲ, ಶಿವಪ್ಪ ಚಿಕ್ಕನ್ನವರ, ಎಸ್.ವಿ. ಕಣವಿಮಠ, ಬಸವರಾಜ ಮುಂಡವಾಡ, ರುದ್ರಪ್ಪ ಲದ್ದಿ, ನಾಗರಾಜ ಕೋಳಿಯವರ, ಮಂಜುನಾಥ ಇಟಗಿ ಪಾಲ್ಗೊಂಡಿದ್ದರು.