ಅಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ
ಗಜೇಂದ್ರಗಡ: ಕರವೇ ತಾಲೂಕಾಧ್ಯಕ್ಷರ ಮೇಲೆ ಹಲ್ಲೆ ನಡೆಸಿದ ನರೇಗಲ್ ನೆಮ್ಮದಿ ಕೇಂದ್ರದ ಅಧಿಕಾರಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರವೇ (ನಾರಾಯಣಗೌಡ ಬಣ) ಕಾರ್ಯಕರ್ತರು ಬುಧವಾರ ವಿಶೇಷ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಈ ವೇಳೆ ನಗರ ಘಟಕ ಅಧ್ಯಕ್ಷ ರಜಾಕ್ ಡಾಲಾಯತ್ ಮಾತನಾಡಿ, ಕರವೇ ತಾಲೂಕಾಧ್ಯಕ್ಷ ನಿಂಗಪ್ಪ ಹೊನ್ನಾಪುರ ಮಾಹಿತಿ ಹಕ್ಕು ಕಾಯ್ದೆ ಅನ್ವಯ ಮಾಹಿತಿ ಕೋರಲು ತಾಲೂಕಿನ ನರೇಗಲ್ ಪಟ್ಟಣದ ನೆಮ್ಮದಿ ಕೇಂದ್ರಕ್ಕೆ ತೆರಳಿದ ಸಂದರ್ಭದಲ್ಲಿ ಕಾರ್ಯಾಲಯದ ಅಧಿಕಾರಿ ಹುಸೇನಸಾಬ ಎಂಬವರು ಅಧ್ಯಕ್ಷರ ಜೊತೆ ಅನುಚಿತವಾಗಿ ವರ್ತಿಸಿದ್ದಲ್ಲದೆ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಧಿಕಾರಿಯನ್ನು ಅಮಾನತು ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಸಂಘಟನೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದರು.
ಕಾರ್ಯದರ್ಶಿ ರಾಜು ಕ್ವಾಟಿ ಮಾತನಾಡಿದರು. ವಿಶೇಷ ತಹಸೀಲ್ದಾರ್ ಕಾರ್ಯಾಲಯ ಸಿಬ್ಬಂದಿ ಎಂ.ಎಚ್. ನದಾಫ್ ಸಂಘಟಕರಿಂದ ಮನವಿ ಸ್ವೀಕರಿಸಿದರು. ಹುಸೇನಸಾಬ ಕವಲೂರ, ಮಂಜು ಅಜಮೀರ, ಶಫಿ ಡಾಲಾಯತ್, ರಾಘು ಮಾದರ, ಯುಸೂಫ್ ಹಿರೇಹಾಳ, ಬುಡ್ಡಾ ಉಟಗೂರ, ಪ್ರಸಾದ ಗಡೇದವರ, ರಫೀಕ ಲಬ್ಬೇರ, ಹುಸೇನ ಡಾಲಾಯತ್, ಗುರು ರಾಠೋಡ, ಅನ್ವರ ಬೇವಿನಗಿಡದ, ಬಾಷಾ ನರೇಗಲ್, ಮಹಮ್ಮದ ಚಾಮ್ಲಾಪುರ, ರಾಜು ಎಸ್. ಉಪಸ್ಥಿತರಿದ್ದರು.