ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗಜೇಂದ್ರಗಡ: ಮತ್ತೆ ಮಟ್ಕಾ, ಇಸ್ಪೀಟ್

Mainashree
Updated On : 10 Jul 2014, 9:10 am

ಗಜೇಂದ್ರಗಡ:  ಪಟ್ಟಣದಲ್ಲಿ ಬೇರು ಸಹಿತ ಕಿತ್ತು ಹಾಕಲಾಗಿದ್ದ ಹೈಟೆಕ್ ಮಟ್ಕಾ ಹಾವಳಿ, ಕಳ್ಳಭಟ್ಟಿ ದಂಧೆ ಜತೆ ಇಸ್ಪೀಟ್ ಕ್ಲಬ್‌ಗಳು ಈಗ ನಾಯಿಕೊಡೆಯಂತೆ ತಲೆ ಎತ್ತಿವೆ. ಹೀಗಿದ್ದರೂ ಯಾರೂ ಕೇಳುತ್ತಿಲ್ಲವೆಂದು ಮಾಜಿ ಸಚಿವ ಕಳಕಪ್ಪ ಬಂಡಿ ಆಕ್ರೋಶ ವ್ಯಕ್ತಪಡಿಸಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಟ್ಟಣದಲ್ಲಿ ಹತ್ತು ವರ್ಷಗಳ ಹಿಂದೆ ಗೌರವಸ್ಥ ಕುಟುಂಬ ಸದಸ್ಯರು ರಸ್ತೆಯಲ್ಲಿ ನಡೆದಾಡದ ಸ್ಥಿತಿ ಇತ್ತು. ಎಲ್ಲೆಂದರಲ್ಲಿ ಇಸ್ಪೀಟ್ ಕ್ಲಬ್‌ಗಳು, ಬೀಡಾ ಅಂಗಡಿ ಯಲ್ಲಿ ಕಳ್ಳಭಟ್ಟಿ ಸಾರಾಯಿ ಮಾರಾಟ ಜತೆ ಮಿನಿ ಬಿಹಾರವಾಗಿ ಮಾರ್ಪಟ್ಟಿತ್ತು. ಇದರಿಂದ ಬೇಸತ್ತ ಜನ ಒಗ್ಗೂಡಿ ಬೀದಿಗೆ ಇಳಿದು ಹೋರಾಟ ನಡೆಸಿದ್ದರು. ಜತೆಗೆ ಅಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಮತ್ತೆ ಅಂತಹ ದುಸ್ಥಿತಿ ನಿರ್ಮಾಣವಾಗಿರುವು ದುರದೃಷ್ಟಕರ. ಇದರ ಬಗೆಗೆ ಧ್ವನಿ ಎತ್ತಬೇಕಾಗಿದೆ ಎಂದರು.
ಬಿಜೆಪಿ ಅಧಿಕಾರ ಅವಧಿಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲಾಗಿತ್ತು. ಆದರೆ ಈಗ ಕಡು ಬಡತನದ ಕುಟುಂಬಗಳು ಹಾಗೂ ಯುವಕರು ಅನಿಷ್ಟ ಜೂಜಾಟದ ಬಲೆಗೆ ಸಿಲುಕಿ ಬೀದಿ ಪಾಲಾಗುತ್ತಿದ್ದಾರೆ. ಅಪರಾಧ  ಕೃತ್ಯಗಳ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದರು.
ನೀರು ಘಟಕಗಳ ಮೇಲೆ ದಾಳಿ ತಪ್ಪು
ಕಡುಬಡತನದ ಕುಟುಂಬಗಳು, ರೈತರು, ಕೃಷಿ ಕೂಲಿಕಾರ್ಮಿಕರು, ನೇಕಾರರು, ಹಮಾಲರು, ಗ್ರಾಮೀಣ, ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಘಟಕಗಳ ಮೇಲೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಡಿ.ಬಿ. ಚೆನ್ನಶೆಟ್ಟಿ ದಾಳಿ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಕಳಕಪ್ಪ ಬಂಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಕುಡಿಯುವ ನೀರು ತೊಂದರೆ ನಿವಾರಿಸುವಲ್ಲಿ ಘಟಕಗಳ ಪಾತ್ರ ಅನುಕೂಲಕರ ಎಂದರು. ಗುಡ್ಡದಿಂದ ಕಲ್ಲುಗಳು, ಗರಸು ಮಣ್ಣು ಅಗೆದು ಮನೆ ನಿರ್ಮಿಸಿದರೆ ತಪ್ಪೇನು? ಎಂದು ಮಾಜಿ ಸಚಿವರು ಸಮರ್ಥಿಸಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement