ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಸತಿರಹಿತರ ಧರಣಿ ಮೂರನೇ ದಿನಕ್ಕೆ

Mainashree
Updated On : 10 Jul 2014, 9:11 am

ಗದಗ: ನಗರದ ವಸತಿರಹಿತರಿಗೆ ಸೂರು ಕಲ್ಪಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಬುಧವಾರ 3ನೇ ದಿನಕ್ಕೆ ಕಾಲಿಟ್ಟಿದೆ.
ಜಿಲ್ಲಾಧಿಕಾರಿಗಳು ಭೇಟಿ ನೀಡಿ ಭರವಸೆ ನೀಡಿದರೆ ಸಾಲದು, ಜಿಲ್ಲಾ ಉಸ್ತುವಾರಿ ಸಚಿವರು ವಸತಿ ರಹಿತರ ಬೇಡಿಕೆಗಳಿಗೆ ಸ್ಪಂದಿಸಿ ವಸತಿ ಸೌಲಭ್ಯ ಕಲ್ಪಿಸಿಕೊಡುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಹೋರಾಟ ಮುಂದುವರಿಸುವುದಾಗಿ ಪ್ರತಿಭಟನಾಕಾರರು ತಿಳಿಸಿದರು.
ಹೋರಾಟಕ್ಕೆ ಜೈ ಭೀಮ ಸೇನಾ ಸಮಿತಿಯಿಂದ ಸಂಪೂರ್ಣ ಬೆಂಬಲವನ್ನು ನೀಡಿ ಜೈ ಭೀಮ ಸೇನಾ ಸಮಿತಿಯ ಜಿಲ್ಲಾ ಅಧ್ಯಕ್ಷ ಅಧ್ಯಕ್ಷ ಗಣೇಶ ಹುಬ್ಬಳ್ಳಿ ಮಾತನಾಡಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ನಡೆಸುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು, ಸವಿತಾ ಸಮಾಜದ ಮುಖಂಡ ಕೃಷ್ಣ ಹಡಪದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು. ಹೋರಾಟದಲ್ಲಿ ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣ ಸಮಿತಿ ಅಧ್ಯಕ್ಷ ಅಶೋಕ ಮ್ಯಾಗೇರಿ, ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ ಆರ್. ಮಾನ್ವಿ, ಮಹಿಳಾ ಸಮಿತಿ ಅಧ್ಯಕ್ಷ ಉಮಾದೇವಿ ಕಾತರಕಿ, ಕಾರ್ಯದರ್ಶಿ ತಿಪ್ಪವ್ವ ಮುಟಗಾರ, ಸ್ಲಂ ಯುವ ಸಮಿತಿ ಅಧ್ಯಕ್ಷ ಶರೀಫ ಬಿಳೆಯಲಿ, ಉಪಾಧ್ಯಕ್ಷ ಯಲಪ್ಪ ರಾಮಗಿರಿ, ಆರತಿ ಎನ್. ಪರವೀನ ಬಡಿಗೇರ, ಇಬ್ರಾಹಿಂ ಮುಲ್ಲಾ, ಅಶೋಕ, ಕುಸಬಿ, ಜೈ ಭೀಮ ಸೇನಾ ಸಮಿತಿ ಮುಖಂಡರಾದ ರಾಘವೇಂದ್ರ ಪರಾಪುರ, ಮಂಜುನಾಥ ತೌಜೂಲ, ಜೋಸೆಫ, ಸ್ಲಂ ಸಮಿತಿ ಮುಖಂಡ ಅಬುಬಕರ ಮಕಾನದಾರ, ಪರಶುರಾಮ ಕಾಳೆ, ಶಹಜಾನಬಿ ಕರ್ನಾಚಿ, ರಾಧಾ ಬೋಡಗಲ್ಲ, ರಾಜು ಮೀರಾನಾಯಕ, ಅನೀಲ ಕಾಳೆ, ನಜಮುನ್ನಿಸಾ ಮುರಗೋಡ, ಮೆಹರುನ್ನಿಸಾ ಡಾಲಾಯತ, ಬಸವರಾಜ ಬಿಳೆಯಲಿ, ಬಾಬುಸಾಬ ಅಗಡಿ, ದ್ಯಾಮಣ್ಣ ಡೋಣಿ, ನವೀನ ಬಣಕಾರ, ಹಾಗೂ ಗದಗ-ಬೆಟಗೇರಿ ಪ್ರದೇಶದ ನೂರಾರು ವಸತಿರಹಿತ ನಿವಾಸಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement