ನೀರು, ಕಲ್ಲು ಬಳಕೆಗೆ ಪರವಾನಗಿ ಬೇಡವೇ?
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ. ಜು. 11
ಮಣ್ಣು, ನೀರು, ಕಲ್ಲು ಅಕ್ರಮವಾಗಿ ಬಳಸುವುದಕ್ಕೆ ಮಾಜಿ ಸಚಿವರು ಬೆಂಬಲಿಸುತ್ತಾರೆ. ಆದರೆ ಅವುಗಳ ಬಗೆಗೆ ಸರ್ಕಾರ ರೂಪಿಸಿರುವ ಕಾನೂನು ಅನ್ವಯ ಪರವಾನಗಿ ಪಡೆದುಕೊಳ್ಳುವುದೆಂದರೆ ಅವರಿಗೆ ಅದೇಕೊ ಇಷ್ಟವಿಲ್ಲವೆಂದು ಕಾಣುತ್ತದೆ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಸುಭಾನಸಾಬ್ ಆರಗಿದ್ದಿ ಹೇಳಿದರು.
ಅವರು ಸ್ಥಳೀಯ ಪ್ರವಾಸಿ ಮಂದಿರದಲ್ಲಿರುವ ಶಾಸಕರ ಜನ ಸಂಪರ್ಕ ಕಾರ್ಯಾಲಯದಲ್ಲಿ ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತರು ಸಭೆಯಲ್ಲಿ ಮಾತನಾಡಿದರು.
ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿಕೆ ವಿರುದ್ಧ ಸಾಮೂಹಿಕವಾಗಿ ಆಕ್ರೋಶ ವ್ಯಕ್ತಪಡಿಸಿದ ನಾಯಕರು, ಪಟ್ಟಣದ ಮೂರು ಬಡಾವಣೆಗೊಂದು ಪುರಸಭೆ ವತಿಯಿಂದ ಶುದ್ಧ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಮಾಡಿದರೆ ಜನತೆಗೆ ಒಳಿತಾಗುತ್ತದೆ. ಆದರೆ ಜನತೆಗೆ ಹೊರೆಯಾದ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳು ಯಾವುದೇ ಪರವಾನಗಿ ಪಡೆಯದೆ ಜನರಿಂದ ಕೊಡಕ್ಕೆ ರು. 10 ಸುಲಿಗೆ ಮಾಡುತ್ತಿರುವವರಿಗೆ ಮಾಜಿ ಸಚಿವರು ಬೆಂಬಲಿಸಿರುವುದು ವ್ಯತಿರಿಕ್ತ ಪರಿಣಾಮ ಬೀರಲಿದೆ.
ಪಟ್ಟಣದಲ್ಲಿ ಈ ಹಿಂದೆ ಹೈಟೆಕ್ ಮಟ್ಕಾ ಹಾವಳಿ, ಕಳ್ಳಭಟ್ಟಿ ದಂಧೆ ಜತೆ ಇಸ್ಪೀಟ್ ಕ್ಲಬ್ಗಳು ನಾಯಿಕೊಡೆಯಂತೆ ಆಟೋಪವನ್ನು ನಡೆಸಿದ್ದವು. ಶಾಸಕರು ಅವುಗಳಿಗೆ ಕಡಿವಾಣ ಹಾಕುವ ಉದೇಶದಿಂದ ಈಗಾಗಲೇ 3 ಜನರನ್ನು ಗಡಿಪಾರು ಮಾಡುವ ಮುಖಾಂತರ ಅಕ್ರಮ ಚಟುವಟಿಕೆಗಳ ಕಡಿವಾಣ ಹಾಕುವ ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಮಾಜಿ ಸಚಿವರ ಆರೋಪ ನಿರಾಧಾರ ಎಂದರು.
ಪುರಸಭೆ ವಿಪಕ್ಷ ನಾಯಕ ಶಿವರಾಜ ಮಾತನಾಡಿದರು. ಮುಖಂಡ ಶ್ರೀಧರ್ ಗಂಜಿಗೌಡರ್, ಚಂಬಣ್ಣ ಚವಡಿ, ಪ್ರಶಾಂತ ರಾಠೋಡ, ಕೋಟೇಶ ಚಿಲಕಾ, ಮಾರುತಿ ಕಲ್ಲವಡ್ಡರ್, ಮೋಹನಸಾ ರಾಯಬಾಗಿ, ಶಶಿಧರ್ ಹೂಗಾರ, ಉಮೇಶ್ ರಾಠೋಡ್, ಹಸನ್ ತಟಗಾರ, ಕಳಕಪ್ಪ ಜಾಡಬಂಡಿ, ಭೀಮಣ್ಣ ತಳವಾರ, ನಾಸೀರ, ಶೇಖಪ್ಪ ಭೋಸಲೆ, ಮುತ್ತಪ್ಪ ಲಕ್ಕಲಕಟ್ಟಿ, ರವಿ ಗಡೇದವರ್, ಪಾಂಡು ಶೀಲವೇರಿ ಉಪಸ್ಥಿತರಿದ್ದರು.