ಇ-ಟೆಂಡರ್ ಯೋಜನೆ ಶೀಘ್ರ ಜಾರಿಗೊಳಿಸಿ
ಕನ್ನಡಪ್ರಭ ವಾರ್ತೆ, ಗದಗ, ಜು. 14
ರಾಜ್ಯ ಸರ್ಕಾರದ ಕೃಷಿ ಮಾರಾಟ ನೀತಿ 2013 ರಂತೆ ರೂಪಿಸಿದ ಆನ್ಲೈನ್ ಮೂಲಕ ಕೃಷಿ ಉತ್ಪನ್ನ ಮಾರಾಟ ಯೋಜನೆಯನ್ನು ಪ್ರಾರಂಭಿಸುವಂತೆ ಆಗ್ರಹಿಸಿ ಸೋಮವಾರ ತಾಲೂಕಿನ ಕೋಟುಮಚಗಿ ಗ್ರಾಮಸ್ಥರು ಗದಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳಿಗೆ ಮನವಿಸಲ್ಲಿಸಿದರು.
ಸರ್ಕಾರವು ಕೃಷಿ ಮಾರುಕಟ್ಟೆಯಲ್ಲಿ ಆನ್ಲೈನ್ ಮೂಲಕ ಕೃಷಿ ಉತ್ಪನ್ನ ಮಾರಾಟ ಯೋಜನೆಯನ್ನು ಈ ವರೆಗೂ ಜಾರಿಗೊಳಿಸದೇ ರೈತವರ್ಗಕ್ಕೆ ಅನ್ಯಾಯವೆಸಗುತ್ತಿದ್ದು, ಮಾರುಕಟ್ಟೆಯಲ್ಲಿ ಖರೀದಿದಾರರ ಹಾಗೂ ಹಮಾಲರ ಶೋಷಣೆಗಳಿಂದ ಕಂಗಾಲಾಗಿದ್ದು, ಈ ಎಲ್ಲ ರೀತಿಯ ತೊಂದರೆಗಳನ್ನು ಹೋಗಲಾಡಿಸಲು ರೈತರ ಅನುಕೂಲಕ್ಕಾಗಿ ತಂದಿರುವ ಇ-ಟೆಂಡರ್ ಹಾಗೂ ಆನ್ಲೈನ್ ಮೂಲಕ ಕೃಷಿ ಉತ್ಪನ್ನಗಳ ಮಾರಾಟ ಯೋಜನೆಯನ್ನು ಶೀಘ್ರಗತಿಯಲ್ಲಿ ಪ್ರಾರಂಭಿಸುವಂತೆ ಮನವಿಯಲ್ಲಿ ತಿಳಿಸಿದೆ.
ದೇವಪ್ಪ ಕಾಡರ, ಹುಚ್ಚಿರಪ್ಪ ಬಡಿಗೇರ, ಫಕೀರಪ್ಪ ಗೋಧಿ, ಕಳಕನಗೌಡ ಪಾಟೀಲ, ನಾಗಪ್ಪ ಗಾಣಿಗೇರ, ಮಲ್ಲಪ್ಪ ಅಲ್ಲಾಪುರ, ಬಸವಂತಪ್ಪ ಇಟಗಿ, ಶಿವಪ್ಪ ಬ್ಯಾಹಟ್ಟಿ, ಶಿವಾನಂದ ಗೌಡ್ನವರ, ನಾರಾಯಣ ಹೊಸಮನಿ, ಶರಣಪ್ಪ ಕರಡಿ, ಶಿವರಾಜ ಪಟ್ಟಣದ, ಎಚ್.ವಿ. ಮ್ಯಾಗೇರಿ, ಭೀಮಣ್ಣ ಬಾರಕೇರ, ದೇವಪ್ಪ ಶಿಂಗ್ಟಾಲಕೇರಿ, ಮಹಾದೇವ ಕರಡಿ, ಶರಣಪ್ಪ ನೀರಲಗಿ, ಅಂದಪ್ಪ ತಳವಾರ, ಮಲ್ಲಪ್ಪ ರಮಾಣಿ, ಸೋಮಪ್ಪ ಮೇಟಿ, ಪರಸಪ್ಪ ಶಿಂಗ್ಟಾಲಕೇರಿ, ಅಶೋಕ ಬ್ಯಾಹಟ್ಟಿ, ಎಸ್.ಡಿ. ಕಾಡರ, ಎಂ.ಎಸ್. ರಮಾಣಿ, ಗವಿಸಿದ್ದಪ್ಪ ರಮಾಣಿ, ಶ್ರೀಧರ ಕುಲಕರ್ಣಿ, ಶರಣಪ್ಪ ಇದ್ದರು.