ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗೋವಾ ಕನ್ನಡಿಗರ ಹಿತ ರಕ್ಷಿಸಿ: ಮನವಿ

Lingaraj Badiger
Updated On : 17 Jul 2014, 10:52 am

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜು. 16
ಗೋವಾದಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಅಲ್ಲಿನ ಸರ್ಕಾರ ಕಡಿವಾಣ ಹಾಕಿ ಕನ್ನಡಿಗರ ಹಿತ ರಕ್ಷಣೆಗೆ ಮುಂದಾಗಬೇಕೆಂದು ಆಗ್ರಹಿಸಿ ಕರವೇ (ಪ್ರವೀಣ ಶೆಟ್ಟಿ ಬಣ) ಕಾರ್ಯಕರ್ತರು ಬುಧವಾರ ವಿಶೇಷ ತಹಸೀಲ್ದಾರ್ ಮೂಲಕ ಗೋವಾ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಹಲವಾರು ವರ್ಷಗಳಿಂದ ಗೋವಾದಲ್ಲಿ ಜೀವನ ಸಾಗಿಸುತ್ತಿರುವ ಸಾವಿರಾರು ಕುಟುಂಬಗಳನ್ನು ಅಲ್ಲಿಂದ ತೆರವುಗೊಳಿಸಲು ಮುಂದಾಗಿರುವುದನ್ನು ಕರವೇ ಖಂಡಿಸುತ್ತದೆ. ಗೋವಾದಲ್ಲಿ ಕನ್ನಡಿಗರ ಮೇಲೆ 3 ದಶಕದಿಂದ ಒಂದಿಲ್ಲೊಂದು ರೀತಿಯಲ್ಲಿ ದೌರ್ಜನ್ಯಗಳು ನಡೆಯುತ್ತಲೆ ಇವೆ. ಇದು ಪ್ರಜಾತಂತ್ರದ ಕಗ್ಗೊಲೆಯಾಗಿದೆ. ಬೈನಾ ಬೀಚ್ ಸಮೀಪದಲ್ಲಿ ವಾಸಿಸುತ್ತಿರುವ ಕನ್ನಡಿಗರ ಕುಟುಂಬಗಳನ್ನು ಸಮುದ್ರ ತೆರೆಗಳು ಅಪ್ಪಳಿಸುವ ಅಪಾಯವಿದೆ ಎನ್ನುವ ಸುಳ್ಳು ನೆಪದಿಂದ ಅಲ್ಲಿಂದ ಸ್ಥಳಾಂತರ ಮಾಡಿರುವ ಗೋವಾ ಸರ್ಕಾರದ ನಡೆ ಸಮಂಜಸವಲ್ಲ. ನಿರಾಶ್ರಿತ ಕನ್ನಡಿಗರಿಗೆ ಶಾಶ್ವತ ಪುನರ್ ವಸತಿ ಕಲ್ಪಿಸಲು ಗೋವಾ ಸರ್ಕಾರಕ್ಕೆ ಅಲ್ಲಿನ ರಾಜ್ಯಪಾಲರು ಮಾರ್ಗದರ್ಶನ ನೀಡಬೇಕೆಂದು ಒತ್ತಾಯಿಸಿದ್ದಾರೆ. ಇದೇ ವೇಳೆ ಸಂಘಟಕರು ವಿಶೇಷ ತಹಸೀಲ್ದಾರ್ ಪಿ.ಬಿ. ಮೇಲಿನಮನಿಯವರಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಉಪಾಧ್ಯಕ್ಷ ಕಳಕಪ್ಪ ಜಾಡಬಂಡಿ, ತಾಲೂಕಾಧ್ಯಕ್ಷ ಶರಣಪ್ಪ ಪೂಜಾರ, ಅಲ್ಲಾಭಕ್ಷಿ ಮುಚ್ಚಾಲಿ, ಮುತ್ತಣ್ಣ ಲಕ್ಕಲಕಟ್ಟಿ, ಉಮೇಶ ರಾಠೋಡ, ಅಂದಪ್ಪ ಕೇರಿ, ದೇವಪ್ಪ ಕಲಾಲ, ಯಲ್ಲಪ್ಪ ಅಡವಿ, ಅಂಬರೀಷ್ ಕವಡಿಮಟ್ಟಿ, ಗುರು ಮಿಸ್ಕಿನ, ಸೋಮಣ್ಣ ರಾಠೋಡ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement