ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶಿರಹಟ್ಟಿ ತಾಪಂ ಅಧ್ಯಕ್ಷರಾಗಿ ಶಾರದಾ, ಉಪಾಧ್ಯಕ್ಷರಾಗಿ ಪಾರ್ವತೆವ್ವ ಆಯ್ಕೆ

Lingaraj Badiger
Updated On : 17 Jul 2014, 10:52 am

ಶಿರಹಟ್ಟಿ: ತಾಲೂಕು ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕಾಗಿ ಬುಧವಾರ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಮೂರನೇ ಅವಧಿಗೆ ಬಾಲೆಹೊಸೂರ ಕ್ಷೇತ್ರದ ಸದಸ್ಯೆ ಶಾರದಾ ಫಕ್ಕೀರೇಶ ಕವಲೂರ ಅಧ್ಯಕ್ಷರಾಗಿ ಹಾಗೂ ಕೊಂಚಿಗೇರಿ ಕ್ಷೇತ್ರದ ಪಾರ್ವತೆವ್ವ ಬಸಪ್ಪ ಗಾಣಿಗೇರ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಚುನಾವಣೆಯಲ್ಲಿ ಹಿಂದುಳಿದ ಬ ವರ್ಗದ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಸಾಮಾನ್ಯ ಮಹಿಳೆಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ನಡೆಯಿತು. ಚುನಾವಣಾಧಿಕಾರಿ, ಉಪ ವಿಭಾಗಾಧಿಕಾರಿ ಇಸ್ಲಾವುದ್ದೀನ ಗದ್ಯಾಳ ಅವಿರೋಧ ಆಯ್ಕೆ ಘೋಷಿಸಿದರು. ಒಟ್ಟು 14 ಸದಸ್ಯ ಬಲ ಹೊಂದಿದ ತಾಲೂಕು ಪಂಚಾಯಿತಿಯಲ್ಲಿ 12 ಸದಸ್ಯರು ಹಾಜರಿದ್ದರು. ಅಧ್ಯಕ್ಷರಿಗೆ ತಿಮ್ಮರಡ್ಡಿ ಅಳವಂಡಿ ಹಾಗೂ ಉಪಾಧ್ಯಕ್ಷರಿಗೆ ನಿಂಬಣ್ಣ ಮಡಿವಾಳರ ಸೂಚಕರಾಗಿದ್ದಾರೆ.
ಮೂಲಸೌಲಭ್ಯಕ್ಕೆ ಆದ್ಯತೆ: ತಾಲೂಕು ಪಂಚಾಯಿತಿ ಸರ್ವ ಸದಸ್ಯರ ಕ್ಷೇತ್ರವನ್ನು ಗಣನೆಗೆ ತೆಗೆದುಕೊಂಡು ಸಮರ್ಪಕ ಕುಡಿಯುವ ನೀರು ಪೂರೈಕೆ, ಚರಂಡಿ, ರಸ್ತೆ ಡಾಂಬರೀಕರಣ ನಿರ್ಮಾಣದಂತಹ ಪ್ರಮುಖ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ನೂತನ ಅಧ್ಯಕ್ಷೆ ಶಾರದಾ ಫಕ್ಕೀರೇಶ ಕವಲೂರ ಭರವಸೆ ನೀಡಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ. ನಾರಾಯಣ, ಸದಸ್ಯರಾದ ನಿಂಬಣ್ಣ ಮಡಿವಾಳರ, ತಿಮ್ಮರಡ್ಡಿ ಅಳವಂಡಿ, ಚನ್ನಪ್ಪ ಜಗಲಿ, ಕೋಟೆಪ್ಪ ವರ್ದಿ, ಗಂಗವ್ವ ಲಮಾಣಿ, ಸುಶೀಲಾ ಲಮಾಣಿ, ಸುನಂದಾ ಬಿದರಳ್ಳಿ, ಸುಷ್ಮಾ ಸೊರಟೂರ, ಪಾರ್ವತೆವ್ವ ಈಟಿ, ಫಕೀರವ್ವ ಮುಂಡವಾಡ ಹಾಜರಿದ್ದರು.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement