ಡೆಂಘೀ ವಿರೋಧಿ ಮಾಸಾಚರಣೆ
ಗಜೇಂದ್ರಗಡ: ಸಮೀಪದ ನಾಗರಸಕೊಪ್ಪ ತಾಂಡಾ ಸಮುದಾಯ ಭವನದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ, ನಿಡಗುಂದಿ ಪ್ರಾಥಮಿಕ ಕೇಂದ್ರ ವತಿಯಿಂದ ಡೆಂಘೀ ವಿರೋಧಿ ಮಾಸ ಆಚರಿಸಲಾಯಿತು.
ನಿಡಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಅಶ್ವಿನಿ ಕೊಪ್ಪದ ಮಾತನಾಡಿ, ಬಯಲು ಸೀಮೆಯಿಂದ ಕಾಫಿ ನಾಡಿನ ಕಡೆಗೆ ದುಡಿಯಲು ಹೋಗಿ (ಗುಳೆ ಹೋದವರು) ಮರಳಿ ಸ್ವಗ್ರಾಮಕ್ಕೆ ಬಂದವರು ಸರ್ಕಾರಿ ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ಚಿಕಿತ್ಸೆ ಪಡೆಯಬೇಕು.
ಆರ್ಥಿಕವಾಗಿ ಸದೃಢವಾಗಲು ಮಂಗಳೂರು, ಬೆಂಗಳೂರು, ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ವಲಸೆ ಹೋಗುತ್ತಾರೆ. ಬರುವಾಗ ತಮ್ಮೊಂದಿಗೆ ಅಲ್ಲಿನ ಸಾಂಕ್ರಾಮಿಕ ರೋಗ ತಗುಲಿಸಿಕೊಂಡು ಬರುತ್ತಾರೆ. ಇದರಿಂದ ಇಲ್ಲಿ ರೋಗ ಹೆಚ್ಚು ಹರಡಲಿದೆ ಎಂದರು.
ಹಿರಿಯ ಆರೋಗ್ಯ ಸಹಾಯಕ ಐ.ಎಸ್. ರಂಜಣಗಿ ಮಾತನಾಡಿದರು. ಶಾಲಾ ಪ್ರಧಾನಗುರು ಎಚ್.ವೈ. ಮೇದಾರ ಮಾತನಾಡಿದರು. ಗೊಗೇರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅನ್ನವ್ವ ಚವ್ಹಾಣ, ಸದಸ್ಯರಾದ ದೇವೇಂದ್ರಪ್ಪ ಚವ್ಹಾಣ, ಎನ್.ಎಸ್. ಖಾಜಿ, ಜಯಶ್ರೀ ಕುಚಬಾಳ, ಸಂಗೀತಾ ನೆಲ್ಲಿಕೊಪ್ಪ ಉಪಸ್ಥಿತರಿದ್ದರು. ಆಶಾ, ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ಕೆ.ಎ. ಬೂದಿಹಾಳ ಸ್ವಾಗತಿಸಿದರು. ಕೃಷ್ಣ ಕುಮಾರ ಕುಲಕರ್ಣಿ ವಂದಿಸಿದರು.