ಬೆಳೆವಿಮೆ ಅವಧಿ ವಿಸ್ತರಣೆ
ಗದಗ: ಬೆಳೆ ಸಾಲ ಪಡೆಯುವ, ಪಡೆಯದ ರೈತರು ಮುಂಗಾರು- 2014ರ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಭಾಗವಹಿಸಲು ಜೂ. 30 ಕೊನೆ ದಿನವಾಗಿತ್ತು. ಈ ದಿನಾಂಕವನ್ನು ಜು. 31ರ ವರೆಗೆ ವಿಸ್ತರಿಸಲಾಗಿದೆ.
ರೈತರು ಭರಿಸಬೇಕಾದ ಪ್ರೀಮಿಯಂ ದರಗಳನ್ನು ಪರಿಷ್ಕರಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಇಲ್ಲವೇ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಲು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.