ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕನ್ನಡಿಗರ ರಕ್ಷಣೆಗೆ ಕರವೇ ಮನವಿ

Rashmi Kasaragodu
Updated On : 20 Jul 2014, 11:54 am

ರೋಣ:  ಗೋವಾದ ಬೈನಾ ಬೀಚ್‌ನಲ್ಲಿರುವ ಕನ್ನಡಿಗರ ಮನೆಗಳನ್ನು ಕೆಡವಿ ಅವರನ್ನು ಬೀದಿಪಾಲು ಮಾಡಿ ಅಲ್ಲಿನ ಕನ್ನಡಿಗರ ಮೇಲೆ ಪೋಲಿಸರು ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಗುರುವಾರ ಪಟ್ಟಣದ ಆಗಮಿಸಿದ್ದ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರಗೆ ಮನವಿ ಸಲ್ಲಿಸಿದರು. ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ನಿಂಗಪ್ಪ ಹೊನ್ನಾಪುರ ಮಾತನಾಡಿ, ಗೋವಾ ಸರ್ಕಾರ ಕನ್ನಡಿಗರ ಮೇಲೆ ತಾತ್ಸಾರ ಭಾವನೆ ಮುಂದುವರೆಸಿದರೆ ಕರ್ನಾಟಕ ರಕ್ಷಣಾ ವೇದಿಕೆಯ ಲಕ್ಷಾಂತರ ಕಾರ್ಯಕರ್ತರೊಂದಿಗೆ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ನಿವಾಸದ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.


ಜನಪದ ಕಾರ್ಯಕ್ರಮ ಇಂದು


ಮುಂಡರಗಿ: ಪಟ್ಟಣದ ತೋಂಟದಾರ್ಯ ಮಠದಲ್ಲಿ ಆಷಾಢ ಮಾಸದ ಅಂಗವಾಗಿ ಜರುಗುತ್ತಿರುವ ಶರಣತತ್ವ ದರ್ಶನ ಪ್ರವಚನ ಕಾರ್ಯಕ್ರಮದ ಅಂಗವಾಗಿ ಜು. 20ರಂದು ಸಂಜೆ 7 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ರೋಣ ತಾಲೂಕಿನ ಕೊತಬಾಳ ಗ್ರಾಮದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಅರುಣೋದಯ ಕಲಾತಂಡದವರಿಂದ ಜನಪದ ಹಾಗೂ ಹಾಸ್ಯಚಕ್ರವರ್ತಿ ಬಸವರಾಜ ಪಾಗದ ಇವರಿಂದ ಹಾಸ್ಯ ಕಾರ್ಯಕ್ರಮ ಜರುಗಲಿದೆ. ಸಂಜೆ 6 ಗಂಟೆಗೆ ಎಂದಿನಂತೆ ಶರಣತತ್ವ ದರ್ಶನ ಪ್ರವಚನ ಜರುಗಲಿದ್ದು, ನಂತರ 7 ಗಂಟೆಯಿಂದ ಸುಮಾರು ಮೂರು ಗಂಟೆಗಳ ಕಾಲ ಜಾನಪದ, ರೈತಗೀತೆ, ಲಾವಣಿ, ಗೀಗೀಪದ, ಹಂತಿಪದ, ಸೋಬಾನಪದ, ತತ್ವದಪ ಹಾಗೂ ಜಾನಪದ ನೃತ್ಯ ಮತ್ತು ವಿಶೇಷವಾಗಿ ಬಸವರಾಜ ಪಾಗದ ಅವರಿಂದ ಹಾಸ್ಯ ಕಾರ್ಯಕ್ರಮ ಜರುಗಲಿದೆ ಎಂದು ಪ್ರವಚನ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ, ಕಾರ್ಯದರ್ಶಿ ಅಶೋಕ ಹುಬ್ಬಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement