ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ದುರಸ್ತಿಯಾಗದ ಟ್ರಾನ್ಸ್‌ಫಾರ್ಮರ್: ಹೆಸ್ಕಾಂ ವಿರುದ್ಧ ಹೈತಾಪುರ ಗ್ರಾಮಸ್ಥರ ಪ್ರತಿಭಟನೆ

Rashmi Kasaragodu
Updated On : 20 Jul 2014, 12:00 pm

ಮುಂಡರಗಿ: ತಾಲೂಕಿನ ಹೈತಾಪುರದಲ್ಲಿ ಟ್ರಾನ್ಸ್‌ಫಾರ್ಮರ್ ಸುಟ್ಟು ವಾರ ಕಳೆದರೂ ಈವರೆಗೆ ಹೆಸ್ಕಾಂನವರು ಟಿಸಿ ದುರಸ್ತಿಗೊಳಿಸದ ಕಾರಣ ಶನಿವಾರ ಮುಂಡರಗಿ ಹೆಸ್ಕಾಂ ಕಚೇರಿ ಮುಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಲಕ್ಷ್ಮಣ ಬೂದಿಹಾಳ ಮಾತನಾಡಿ, ಹೈತಾಪುರದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಯಾಗದ ಕಾರಣ ಹಿಟ್ಟಿನ ಗಿರಣಿ, ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ್ದು, ರಾತ್ರಿ ಇಡೀ ಸಂಪೂರ್ಣ ಊರಿನ ಜನರೆಲ್ಲ ಕತ್ತಲೆಯಲ್ಲಿಯೇ ಇದ್ದು, 7-8 ದಿನಗಳಿಂದ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಗ್ರಾಮಸ್ಥರು ಸಾಕಷ್ಟು ತೊಂದರೆ ಅನುಭವಿಸುತ್ತಿರುವುದರಿಂದ ಇಂದು ಪ್ರತಿಭಟನೆಗೆ ಮುಂದಾಗಿರುವುದಾಗಿ ತಿಳಿಸಿದರು. ಇದೇ ರಸ್ತೆ ಮಾರ್ಗವಾಗಿ ಶಿರಹಟ್ಟಿ ಕಡೆಗೆ ತೆರಳುತ್ತಿದ್ದ ಶಾಸಕ ರಾಮಕೃಷ್ಣ ದೊಡ್ಡಮನಿ ಹೈತಾಪುರ ಗ್ರಾಮಸ್ಥರ ಸಮಸ್ಯೆ ಬಗೆಹರಿಸಲು ಸ್ಥಳಕ್ಕೆ ಆಗಮಿಸಿದರು. ಅವರು ಹೆಸ್ಕಾಂ ಅಧಿಕಾರಿ ಮಂಜುಳಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕೂಡಲೇ ಗ್ರಾಮಕ್ಕೆ ಟಿಸಿ ಪೂರೈಸಿ ಅನುಕೂಲ ಮಾಡಿಕೊಡಬೇಕೆಂದು ಸೂಚಿಸಿದರು. ಅದಕ್ಕೆ ಅಧಿಕಾರಿ ಒಪ್ಪಿದ ಹಿನ್ನೆಲೆಯಲ್ಲಿ ಶನಿವಾರ ಸಂಜೆಯೊಳಗೆ ಟಿಸಿ ಪೂರೈಸುವ ಭರವಸೆ ಸಿಕ್ಕ ಮೇಲೆ ಗ್ರಾಮಸ್ಥರು ತಮ್ಮ ಪ್ರತಿಭಟನೆ ಕೈಬಿಟ್ಟರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರಾಮಕೃಷ್ಣ ದೊಡ್ಡಮನಿ, ಮುಂಡರಗಿ ಮತ್ತು ಲಕ್ಷ್ಮೇಶ್ವರ ಪಟ್ಟಣಗಳಿಗೆ ಟಿಸಿ ದುರಸ್ತಿ ಕೇಂದ್ರ ಶೀಘ್ರದಲ್ಲಿಯೇ ಆರಂಭವಾಗಲಿದ್ದು, ಗ್ರಾಮಕ್ಕೆ ನೀರು ಪೂರೈಕೆಗಾಗುವ ಟಿಸಿ ಸುಟ್ಟ ಒಂದು ದಿನದಲ್ಲಿ ಹಾಗೂ ನೀರಾವರಿ ಟಿಸಿ ಮೂರು ದಿನದಲ್ಲಿ ಕೊಡಲು ವ್ಯವಸ್ಥೆಯಾಗುವುದು. ರೈತರು, ಗ್ರಾಮಸ್ಥರು ಸಹಕರಿಸಬೇಕು ಎಂದರು.    

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement