ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಧಾರ್ಮಿಕ ಆಚರಣೆಗಳಿಂದ ಸೌಹಾರ್ದ: ನೂರಿ

Rashmi Kasaragodu
Updated On : 20 Jul 2014, 11:54 am

ಗಜೇಂದ್ರಗಡ: ಧಾರ್ಮಿಕ ಆಚರಣೆಗಳು ಸಮಾಜದಲ್ಲಿ ಸೌಹಾರ್ದತೆ ಹಾಗೂ ಭಾವೈಕ್ಯತೆ ಸಾಮರಸ್ಯ ಗಟ್ಟಿಗೊಳಿಸುತ್ತವೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಭೇದ-ಭಾವ ತೊರೆದು ಬಾಳಿ ಬದುಕಿದಾಗ ಧಾರ್ಮಿಕ ಆಚರಣೆಗಳು ಸಾರ್ಥಕಗೊಳ್ಳುತ್ತವೆ ಎಂದು ಮೌಲಾನಾ ತಲಹಾ ರೋಶನ್ ನೂರಿ ಹೇಳಿದರು. ಪಟ್ಟಣದ ಕುಷ್ಟಗಿ ರಸ್ತೆ ಜಮಾಲಶಾವಲಿ ದರ್ಗಾ ಬಳಿಯ ಮಸೀದಿಯಲ್ಲಿ ಪವಿತ್ರ ರಂಜಾನ್ ಮಾಸದ ಪ್ರಯುಕ್ತ ಮಂಗಳವಾರ ಸಂಜೆ ಸ್ಥಳೀಯ ಇಂಡಿಯನ್ ಅಟೋ ಗ್ರೂಫ್ ವತಿಯಿಂದ ಉಪವಾಸ ನಿರತ ಮುಸ್ಲಿಮ್ ಬಾಂಧವರಿಗೆ ಏರ್ಪಡಿಸಿದ ಇಫ್ತಾರ್ ಕೂಟದ ಸಾನ್ನಿಧ್ಯವಹಿಸಿ ಮಾತನಾಡಿದರು. ಹಾಜಿ ಪಿ.ಕೆ. ಭಾಗವಾನ, ಅನ್ವರಭಾಷಾ ಹಿರೇಕೊಪ್ಪ, ಮೌಲಾಸಾಬ ಗೊಡೇಕಾರ, ಪ್ರಶಾಂತ ಕಲಾಲ, ರಂಜಾನಸಾಬ ಸಂಕನೂರ, ರಹೀಮ ಗೊಡೇಕಾರ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement