ವಿದ್ಯಾರ್ಥಿಗಳಿಗೆ ಕ್ವಿಜ್ ಸ್ಪರ್ಧೆ
ಲಕ್ಷ್ಮೇಶ್ವರ: ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆ ನಂ. 2ರಲ್ಲಿ ಶನಿವಾರದಂದು ಗುರು ಪೂರ್ಣಿಮೆ ಅಂಗವಾಗಿ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹೊಸ ಹೊಸ ವಿಷಯಗಳ ಬಗ್ಗೆ ಮಕ್ಕಳಲ್ಲಿನ ಆಸಕ್ತಿ ಹುಟ್ಟುವಂತೆ ಕ್ವಿಜ್ ಕಾರ್ಯಕ್ರಮ ಮಾಡುತ್ತದೆ ಎಂದು ಮುಖ್ಯೋಪಾಧ್ಯಾಯಿನಿ ಎಸ್.ಜಿ. ಮಾದನಭಾವಿ ಹೇಳಿದರು. ಎಸ್.ಡಿ.ಎಂ.ಸಿ. ಅಧ್ಯಕ್ಷ ಗಂಗಾಧರ ಶಿರಗಣ್ಣವರ ಮಾತನಾಡಿ, ಸಮಾಜದಲ್ಲಿ ಗುರುವಿಗಿಂತ ಮಿಗಿಲಾದವರು ಯಾರೂ ಇಲ್ಲ ಅದಕ್ಕಾಗಿ ಗುರುಗಳಿಗೆ ಗೌರವವನ್ನು ಕೊಟ್ಟು ಆದರಿಸುವ ಸಂಪ್ರದಾಯ ಹಿಂದಿನಿಂದಟಿಡಿ ನಡೆದುಕೊಂಡು ಬಂದಿದೆ ಎಂದರು. ಶಿಕ್ಷಕಿ ಎಸ್.ಎಸ್. ಜೀರಂಕಳ್ಳಿ, ಕೆ.ಆರ್. ಸುತಾರ, ಎಂ.ವಿ. ಪಲ್ಲೇದ ಕ್ವಿಜ್ ಕಾರ್ಯಕ್ರಮ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಕ್ವಿಜ್ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಸ್ಥಾನಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.