ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅತ್ಯಾಚಾರ ಖಂಡಿಸಿ ಕರವೇ ಪ್ರತಿಭಟನೆ

Lingaraj Badiger
Updated On : 22 Jul 2014, 10:54 am

ಶಿರಹಟ್ಟಿ: ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇದ್ದು, ಅಮಾನವೀಯವಾಗಿ ವರ್ತಿಸುತ್ತಿರುವ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಕರವೇ ತಾಲೂಕು ಘಟಕದ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕೊಟೇಶ್ವರ ಗಾಳಿಗೆ ಮನವಿ ಸಲ್ಲಿಸಿದರು.
ಸುನೀಲ ಪವಾರ, ಉಮೇಶ ಪಲ್ಲೇದ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಳಿ ತಪ್ಪಿದ್ದು, ಅದನ್ನು ಸರಿದಾರಿಗೆ ತರುವಲ್ಲಿ ಗೃಹ ಸಚಿವರು ವಿಫಲರಾಗಿದ್ದಾರೆ. ಅತ್ಯಾಚಾರ ಪ್ರಕರಣವನ್ನು ನಿಗದಿತ ಸಮಯದೊಳಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ಕೂಡಲೇ ಆರೋಪ ಪಟ್ಟಿ ಸಲ್ಲಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕರವೇ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಜೋತಿ ಸರ್ಜಾಪುರ, ಮುತ್ತುರಾಜ ಭಾವಿಮನಿ, ಮಾರುತಿ ಇಟಗಿ, ಬಸವರಾಜ ನರಗುಂದ, ಲಕ್ಷ್ಮಣ ಇಟಗಿ, ಹಾಲನಗೌಡ ಪಾಟೀಲ, ಹೊನ್ನಪ್ಪ ಇಟಗಿ, ಗುರಣ್ಣ ವಡ್ಡರ, ದೇವೇಂದ್ರಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement