ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಕ್ಕಳಿಗೆ ಕಾನೂನು ತಿಳಿವಳಿಕೆ ಇರಲಿ

Lingaraj Badiger
Updated On : 23 Jul 2014, 11:04 am

ಕನ್ನಡಪ್ರಭ ವಾರ್ತೆ, ಮುಂಡರಗಿ, ಜು. 22         
ಶಾಲಾ ಮಕ್ಕಳು ಪ್ರಾಥಮಿಕ ಕಾನೂನು ತಿಳಿವಳಿಕೆ ಜತೆಗೆ ರಸ್ತೆ ಮಧ್ಯದಲ್ಲಿ ನಿಲ್ಲುವದು, ಚಿಕ್ಕ ಮಕ್ಕಳು ಬೈಕ್ ಓಡಿಸುವುದು ಕಾನೂನು ಉಲ್ಲಂಘನೆಯಾಗುತ್ತದೆ. ತಮ್ಮ ಸುರಕ್ಷತೆ ಜತೆಗೆ ಸಾರ್ವಜನಿಕರಿಗೂ ತೊಂದರೆಯಾಗದಂತೆ ನಡೆದುಕೊಳ್ಳಬೇಕು. ಎಲ್ಲರೂ ಕಾನೂನು ಗೌರವಿಸಬೇಕೆಂದು ಮುಂಡರಗಿ ಜೆ.ಎಂ.ಎಫ್.ಸಿ. ನ್ಯಾಯಾಲಯದ ದಿವಾಣಿ ನ್ಯಾಯಾಧೀಶ ಸುಜಾತಾ ಸುವರ್ಣ ಹೇಳಿದರು.          
ಅವರು ಸ್ಥಳೀಯ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ತಾಲೂಕಾ ಕಾನೂನು ಸೇವಾ ಸಮಿತಿ ಹಾಗೂ ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರತಿಯೊಬ್ಬರೂ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಹೊಂದಿರಬೇಕು. ಉಚ್ಚ ನ್ಯಾಯಾಲಯ ಆದೇಶದ ಮೇರೆಗೆ ವಿದ್ಯಾರ್ಥಿಗಳಿಗೆ ಹಕ್ಕು ಮತ್ತು ಕರ್ತವ್ಯಗಳ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗುತ್ತಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಮೂಡಿಸಲು ಅನುಕೂಲವಾಗಲಿದೆ ಎಂದರು.  ನ್ಯಾಯವಾದಿ ನಾಗಭೂಷಣ ಹಿರೇಮಠ, ಮಕ್ಕಳ ಹಕ್ಕು ಮತ್ತು ಕರ್ತವ್ಯ ಹಾಗೂ ಇತರ ಹಕ್ಕುಗಳ ಬಗ್ಗೆ ಉಪನ್ಯಾಸ ನೀಡಿದರು. ಸರ್ಕಾರಿ ಸಹಾಯಕ ಅಭಿಯೋಜಕ ಆರ್. ಮಂಜುನಾಥ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡೇರ ಮಾತನಾಡಿದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಬಿ.ವಿ. ಹೆಗ್ಗಡಾಳ ಅಧ್ಯಕ್ಷತೆ ವಹಿಸಿದ್ದರು.  ಪಿ.ಜಿ. ಹಿರೇಮಠ, ಎಂ.ವಿ. ಅರಳಿ, ಎ.ಕೆ. ಜೈನ್, ರಚನಾ ಗದಗ, ಜಯಂತ ಹಟ್ಟಿ, ಸಾವಿತ್ರಿ ಕುಲಕರ್ಣಿ, ಪ್ರಭುರಾಜಯ್ಯ ಕುಲಕರ್ಣಿ, ಎಂ.ಸಿ. ಉಳ್ಳಾಗಡ್ಡಿ ಪಾಲ್ಗೊಂಡಿದ್ದರು. ಎಸ್.ಎಸ್. ಮುಂಡರಗಿ ಸ್ವಾಗತಿಸಿ, ಹಂಪಿಮಠ ನಿರೂಪಿಸಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement