ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಖಂಡತೆಯೇ ದೇಸಿ ಸಂಸ್ಕೃತಿ ಜೀವಾಳ: ಡಾ. ವೀರೇಶ

Lingaraj Badiger
Updated On : 24 Jul 2014, 11:49 am

ಗದಗ: ದೊಡ್ಡಾಟ ರಂಗಭೂಮಿಯಲ್ಲಿ ಜೀವಂತಿಕೆ ಕೂಡಿದೆ. ಅದು ಅಪ್ಪಟ ದೇಸಿ ಕಲೆಯಾಗಿದೆ. ಇದರ ಜೀವಾಳವೇ ಅಖಂಡತೆ ಸಾಧಿಸುವುದಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಸಂಶೋಧಕ ಡಾ. ವೀರೇಶ ಬಡಿಗೇರ ಹೇಳಿದರು.
ಬುಧವಾರ ನಗರದ ತೋಂಟದಾರ್ಯ ಮಠದಲ್ಲಿ ಗ್ರಾಮರಂಗ ಮೂಡಲಪಾಯ ದೊಡ್ಡಾಟ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಇಂಗಳಗಿಯವರು ಹಮ್ಮಿಕೊಂಡ ಮೂಡಲಪಾಯ ದೊಡ್ಡಾಟ ರಂಗ ತರಬೇತಿ ಶಿಬಿರದಲ್ಲಿ 'ದೊಡ್ಡಾಟ ರಂಗಭೂಮಿಯ ದೇಸಿಯತೆ' ಕುರಿತು ಅವರು ಉಪನ್ಯಾಸ ನೀಡಿದರು.
ಇಂದು ಕಲಾವಿದರ ಸೋಗು ಹಾಕಿಕೊಂಡು ಅನೇಕರು ಸರ್ಕಾರದ ಮುಂದೇ ಭಿಕ್ಷುಕರಂತೆ ಅನುದಾನ ಬೇಡುತ್ತಿದ್ದಾರೆ. ಆದರೆ, ದೊಡ್ಡಾಟ ಕಲಾವಿದರು ತಾವು ಕೂಡಿಟ್ಟ ಹಣದಲ್ಲಿಯೇ ಬಯಲಾಟ ಆಡಿ ಖುಷಿಪಡುತ್ತಾರೆ. ಕೃಷಿ ಪರಂಪರೆಗೂ ರಂಗಭೂಮಿಗೂ ನಿಕಟ ಸಂಪರ್ಕವಿದೆ. ಇಲ್ಲಿ ಚಲನಾಶೀಲ ಸಮಾಜವನ್ನು ಪ್ರಶ್ನಿಸುವ ಕೌಶಲ ಬಯಲಾಟ ಹೊಂದಿರುತ್ತದೆ.
ವಿದ್ಯಾದಾನ ಶಿಕ್ಷಣ ಸಮಿತಿ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವಕರಿಂದ ಕಲೆ ಉಳಿಯಲು ಸಾಧ್ಯ. ಅಂಥ ಪ್ರಯತ್ನವನ್ನು ಗ್ರಾಮರಂಗ ಮಾಡುತ್ತಿದೆ. ಅದರ ಸದುಪಯೋಗವನ್ನು ನಾವು ಬಳಸಿಕೊಳ್ಳಬೇಕು. ಜವಳಿ ಉದ್ದಿಮೆದಾರ ಬಲರಾಮ ಬಸವ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭ ಬಸವರಾಜ ಶಿಗ್ಗಾಂವಿ, ಅಡಿಯೆಯ್ಯ ಹಿರೇಮಠ ಸಂಗಡಿಗರು ದೊಡ್ಡಾಟದ ಪ್ರಾರ್ಥನಾ ಗೀತೆ ನೆರವೇರಿದರು. ವೀರೇಶ ಬಡಿಗೇರ ಸ್ವಾಗತಿಸಿದರು. ಗ್ರಾಮರಂಗದ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್. ಮಾಳವಾಡ ಪ್ರಾಸ್ತಾವಿಕ ಮಾತನಾಡಿದರು. ರಾಜಶೇಖರ ಮಾಳವಾಡ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement