ಸಂಸತ್ ರಚನೆ
ಹೊಳೆಆಲೂರು: ಸ್ಥಳೀಯ ಗಾಡಗೋಳಿ ರಸ್ತೆಯಲ್ಲಿರುವ ಯಚ್ಚರೇಶ್ವರ ಪದವಿಪೂರ್ವ ಮಹಾವಿದ್ಯಾಲಯದ ಸಭಾಭವನದಲ್ಲಿ ಈಚೆಗೆ ಮಾದರಿ ಸಂಸತ್ ರಚಿಸಲಾಯಿತು. ಸಾರ್ವತ್ರಿಕ ಚುನಾವಣೆ ಮಾದರಿಯಲ್ಲೇ ಬೂತ್‌ಗಳನ್ನು ನಿರ್ಮಿಸಿ ಪ್ರತಿ ವರ್ಗಗಳಿಗೂ ಪ್ರತ್ಯೇಕ ಚುನಾವಣೆಯನ್ನು ಮತದಾನ ಪೆಟ್ಟಿಗೆಗಳ ಮಾದರಿ ಇಟ್ಟು, ಸ್ಪರ್ಧಾ ಅಭ್ಯರ್ಥಿ ವಿದ್ಯಾರ್ಥಿಗಳ ಹೆಸರುಗಳನ್ನು ಮತಪತ್ರಗಳ ಮಾದರಿಯಲ್ಲಿ ಬರೆದು ಮತದಾನ ನಡೆಸಲಾಯಿತು. ನಂತರ ಎರಡು ಸುತ್ತಿನ ಮತ ಎಣಿಕೆಗಳನ್ನು ನಡೆಸಿ ವರ್ಗದ ಪ್ರತಿನಿಧಿ ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಗಳಾಗಿ ಪ್ರೊ. ವಿಶ್ವನಾಥ ಪಾಟೀಲ ಕಾರ್ಯನಿರ್ವಹಿಸಿದರು. 8ನೇ ವರ್ಗದಿಂದ ಪಿಯು ದ್ವಿತೀಯ ವರ್ಗದವರೆಗೆ 7 ಭೂತಗಳಲ್ಲಿ ಮತದಾನ ನಡೆಸಲಾಯಿತು. ಪ್ರಾ. ಎಸ್.ಪಿ. ನದಾಫ್, ಚಹ್ವಾಣ, ತಿಪಶೆಟ್ಟರ್, ಮುಶಿಗೇರಿ, ಆಡಿನ, ಎಲಿಗಾರ, ಕಿತ್ತಲಿ, ಚನ್ನಪ್ಪಗೌಡ್ರ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು. ಸಂಸ್ಥೆ ಅಧ್ಯಕ್ಷ ಎ.ಎನ್. ಬಡಿಗೇರ, ಸದಸ್ಯ ಬಿ.ಆರ್. ಬಡಿಗೇರ, ಎಂ.ಎನ್. ಪಾಯಪ್ಪಗೌಡರ ಚುನಾವಣಾ ವೀಕ್ಷಕರಾಗಿ ಮತದಾನ ಕೇಂದ್ರಗಳಿಗೆ ಭೇಟಿ ನೀಡಿ ಪ್ರಕ್ರಿಯೆ ಪರಿಶೀಲಿಸಿದರು.
--