ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಉರ್ದು ಶಾಲೆ ಮುಚ್ಚುವುದು ಬೇಡ

Lingaraj Badiger
Updated On : 26 Jul 2014, 10:54 am

ಕನ್ನಡಪ್ರಭ ವಾರ್ತೆ, ಮುಂಡರಗಿ, ಜು. 25   
ಕೆಲ ಶಾಸಕರು ಉರ್ದು ಶಾಲೆಗಳನ್ನು ಮಚ್ಚಬೇಕೆಂದು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ತಾಲೂಕಿನ ಕಲಕೇರಿ ಗ್ರಾಮದ ಅಂಜುಮನ್ ಎ ಇಸ್ಲಾಂ ಕಮಿಟಿ ಈ ಹೇಳಿಕೆಯನ್ನು ಖಂಡಿಸುವ ಮೂಲಕ ಉರ್ದು ಶಾಲೆಗಳನ್ನು ಮುಚ್ಚದಂತೆ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ನೀಡಿ ಒತ್ತಾಯಿಸಿದ್ದಾರೆ.     
ಈಗಾಗಲೇ ಉರ್ದು ಶಿಕ್ಷಣವನ್ನು ಮುಗಿಸಿ, ಸರ್ಕಾರಿ ಉದ್ಯೋಗ ಪಡೆದಿರುವ ಲಕ್ಷಾಂತರ ಜನರಿದ್ದಾರೆ. ಇನ್ನು ಉರ್ದು ಭಾಷೆಯಲ್ಲಿಯೇ ಶಿಕ್ಷಣ ಮುಗಿಸಿ ಉದ್ಯೋಗಕ್ಕಾಗಿ ಕಾಯುತ್ತಿರುವವರೂ ಇದ್ದಾರೆ. ಆದರೆ ಸರ್ಕಾರದಲ್ಲಿ ಕೆಲವು ಶಾಸಕರು, ಸಚಿವರು ಉರ್ದು ಶಾಲೆಗಳನ್ನು ಮುಚ್ಚುವ ಕುರಿತು ವಿಷಯ ಪ್ರಸ್ತಾಪಿಸಿರುವುದು ಒಂದು ಸಮುದಾಯಕ್ಕೆ ಅನ್ಯಾಯ ಮಾಡುವ ಹುನ್ನಾರ ನಡೆಯುತ್ತಿದೆ. ರಾಜ್ಯದಲ್ಲಿ 5865 ಪ್ರಾಥಮಿಕ ಶಾಲೆ, 126 ಪ್ರೌಢಶಾಲೆ ಹಾಗೂ 123 ಪದವಿ ಪೂರ್ವ ಉರ್ದು ಕಾಲೇಜುಗಳಿವೆ. ಇವುಗಳನ್ನು ಮುಚ್ಚುವುದರಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಜೀವನ ಬೀದಿಪಾಲಾಗುತ್ತದೆ. ಇದನ್ನು ಅರಿಯದ ಕೆಲವು ಶಾಸಕರು ಶಾಲೆಗಳನ್ನು ಮುಚ್ಚುವುದಾಗಿ ಹೇಳಿಕೆ ನೀಡಿರುವುದು ಖಂಡನಾರ್ಹವಾಗಿದೆ.  ಉರ್ದು ಶಾಲೆಗಳಲ್ಲಿ 1ನೇ ತರಗತಿಯಿಂದ ಕನ್ನಡ ಮತ್ತು ಇಂಗ್ಲಿಷ್ ಕಡ್ಡಾಯಗೊಳಿಸಬೇಕು. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಸರ್ಕಾರ ಪರಾಮರ್ಶೆ ಮಾಡಿ ಕೈಗೊಳ್ಳುವ ನಿರ್ಣಯದಿಂದ ಒಂದು ಸಮುದಾಯಕ್ಕೆ ನೋವಾಗದಂತೆ ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ಶಾಸಕರು ನೀಡುವ ಇಂತಹ ಹೇಳಿಕೆಗಳಿಂದಾಗಿ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ತಹಸೀಲ್ದಾರ್ ಪರವಾಗಿ ಶಿರಸ್ತೇದಾರ್ ಜಿ.ಆರ್. ಕುಲಕರ್ಣಿ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕಮಿಟಿ ಸದಸ್ಯರಾದ ಆರ್.ಎಂ. ಖತೀಬ, ಬಿ.ಜೆ. ಅಳವಂಡಿ, ಡಿ.ಎಂ. ಶಿರೋಳ, ಎಂ.ಯು. ಮಕಾನದಾರ, ಎಂ.ಎಂ. ಮಾಳೆಕೊಪ್ಪ, ಜೆ.ಎಚ್. ಮುಲ್ಲಾ ಮತ್ತು ಎಂ.ಎಂ. ಮುಲ್ಲಾ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement