ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಉಜ್ವಲ ಭವಿಷ್ಯಕ್ಕಾಗಿ ವೃತ್ತಿ ಶಿಕ್ಷಣ: ಶಿವರಾಜ

Rashmi Kasaragodu
Updated On : 27 Jul 2014, 12:44 pm

ಗದಗ: ಇಂದಿನ ತಂತ್ರಜ್ಞಾನ ದಿನಮಾನಕ್ಕೆ ಸ್ಪರ್ಧೆ ಹೆಚ್ಚಾಗಿರುವುದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಹಲವಾರು ವೃತ್ತಿ ಶಿಕ್ಷಣ ಕೋರ್ಸ್ ಇವೆ. ಸರಿಯಾದ ಕೋರ್ಸ್ ಆಯ್ಕೆ ಮಾಡಿಕೊಂಡಾಗ ಯಶಸ್ಸು ಸಾಧ್ಯ ಎಂದು ಉಪನ್ಯಾಸಕ ಕೆ. ಶಿವರಾಜ ಹೇಳಿದರು. ಅವರು ಈಚೆಗೆ ನಗರದ ಕಲಾಮಂದಿರದಲ್ಲಿ ಅರವಿಂದ ಸಪೋರ್ಟ್ ಸರ್ವಿಸಸ್ ಗದಗ ವತಿಯಿಂದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ನಂತರ ಮುಂದೇನು? ಎಂಬ ಕಾರ್ಯಾಗಾರದಲ್ಲಿ ಉಪನ್ಯಾಸಕರಾಗಿ ಪಾಲ್ಗೊಂಡು ಉಪನ್ಯಾಸ ನೀಡಿದರು. ಭವಿಷ್ಯದ ಮಾರ್ಗದರ್ಶನಕ್ಕಾಗಿ ಅರವಿಂದ ಸಪೋರ್ಟ್ ಸರ್ವಿಸಸ್ ಕಾರ್ಯ ಶ್ಲಾಘನೀಯ ಎಂದರು. ಕಾರ್ಯಾಗಾರದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲಾಯಿತು. ಅನಿಮೇಶನ್ ವೃತ್ತಿ ಶಿಕ್ಷಣ ಇಂದು ಜಗತ್ತಿನಲ್ಲಿ ಹೊಸ ಅಧ್ಯಾಯ ಸೃಷ್ಟಿಸಿದ ಕುರಿತು ರಾಜು ಕೆ. ಪ್ರಾತ್ಯಕ್ಷಿಕೆ ನೀಡಿದರು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement