ಎಂಇಎಸ್ ಪು ಂಡಾಟಿಕೆ: ಕರವೇ ಪ್ರತಿಭಟನೆ
ಲಕ್ಷ್ಮೇಶ್ವರ: ಯಳ್ಳೂರಿನಲ್ಲಿ ಮರಾಠಿ ಭಾಷೆಯಲ್ಲಿ ಹಾಕಿದ್ದ ನಾಮಫಲಕವನ್ನು ತೆರವುಗೊಳಿಸಿರುವುದಕ್ಕೆ ಆಕ್ರೋಶಗೊಂಡ ಎಂಇಎಸ್ ಪುಂಡರು ಶನಿವಾರ ಪುನಃ ಮರಾಠಿ ಭಾಷೆಯ ನಾಮಫಲಕ ನಿರ್ಮಿಸಿ ಕರ್ನಾಟಕದ ಪೊಲೀಸ್ ಇಲಾಖೆ ಹಾಗೂ ಮಾಧ್ಯಮದವರ ಮೇಲೆ ನಡೆಸಿದ ಹಲ್ಲೆಯನ್ನು ಖಂಡಿಸಿ ಶಿರಹಟ್ಟಿ ತಾಲೂಕು ಕರವೇ ಕಾರ್ಯಕರ್ತರು ಪಟ್ಟಣದ ಶಿಗ್ಲಿ ಕ್ರಾಸ್ ಹತ್ತಿರ ರಸ್ತೆ ತಡೆ ನಡೆಸಿ ಟೈರ್‌ಗೆ ಬೆಂಕಿ ಹಚ್ಚಿದರು. ಶಿರಹಟ್ಟಿ ತಾಲೂಕು ಕರವೇ ಅಧ್ಯಕ್ಷ ಶರಣು ಗೋಡಿ ಮಾತನಾಡಿ, ಗಡಿಭಾಗದಲ್ಲಿ ತಂಟೆ ಮಾಡಿ ಕರ್ನಾಟಕದ ಸಹೋದರರೊಂದಿಗೆ ಕಾದಾಡುವ ಗೂಂಡಾಗಳಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆ ನಂತರ ಪಟ್ಟಣದ ತಹಸೀಲ್ದಾರ್‌ಗೆ ಮನವಿ ಅರ್ಪಿಸಲಾಯಿತು. ಪ್ರತಿಭಟನೆಯಲ್ಲಿ ನಾಗೇಶ ಅಮರಾಪುರ, ಗಣೇಶ ಕುಂಬಾರ, ಪ್ರಕಾಶ ಕೊಂಚಿಗೇರಿಮಠ, ಫಕ್ಕೀರೇಶ ಶಿವಬಸಣ್ಣವರ ಇದ್ದರು.