ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗುರುವಿನ ಆರಾಧನೆ ಪ್ರತಿಯೊಬ್ಬರ ಕರ್ತವ್ಯ

Rashmi Kasaragodu
Updated On : 27 Jul 2014, 12:44 pm

ಗದಗ:  ಪ್ರತಿಯೊಬ್ಬರ ಜೀವನದಲ್ಲಿ ತಾಯಿಯ ನಂತರದ ಸ್ಥಾನ ಗುರುವಿಗೆ ಇದ್ದು, ಗುರುವಿನಲ್ಲಿ ಪರಮಾತ್ಮನ ವಿಶೇಷ ತತ್ವ ಅಡಗಿರುತ್ತದೆ. ಆದ್ದರಿಂದ ಗುರುವಿನ ಆರಾಧನೆ ಪ್ರತಿಯೊಬ್ಬರ ಪರಮ ಕರ್ತವ್ಯವಾಗಿದೆ ಎಂದು ನಿರ್ಭಯಾನಂದ ಸರಸ್ವತಿ ಶ್ರೀಗಳು ಹೇಳಿದರು. ಅವರು ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ  ಗುರುಪೂರ್ಣಿಮೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಈಚೆಗೆ ಸನ್ಯಾಸ ಸ್ವೀಕರಿಸಿದ ಬಿಜಾಪುರದ ಕೈವಲ್ಯಮಯಿ ಮಾತಾಜಿ, ಹೊಸಪೇಟೆಯ ಕೃಪಾಮಯಿ, ರಾಯಚೂರಿನ ಶಿವಮಯಿ ಅವರನ್ನು ಗೌರವಿಸಲಾಯಿತು. ಎಪಿಎಂಸಿ ಅಧ್ಯಕ್ಷ ಡಿ.ಆರ್. ಪಾಟೀಲ, ಶಿವನಗುತ್ತಿ, ಆರ್.ಎಲ್. ಹಂಸನೂರ, ರಾಮಚಂದ್ರ ಕುಲಕರ್ಣಿ, ಶಿರಸಿ, ದತ್ತಪ್ರಸನ್ನ ಪಾಟೀಲ, ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಎಂ.ಬಿ. ಗೌಡರ ಉಪಸ್ಥಿತರಿದ್ದರು. ಎಸ್.ಎಚ್. ದೇಶಪ್ಪನವರ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement