ನಗರ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ: ಕಮಲಾ ಹಾದಿಮನಿ
ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಸ್ವಚ್ಛತೆಗಾಗಿ ಹೆಚ್ಚಿನ ಗಮನಹರಿಸಿದ್ದು, ಸಾರ್ವಜನಿಕರು ನಗರಸಭೆಯ ಸಿಬ್ಬಂದಿಯೊಂದಿಗೆ ಸಹಕಾರ ನೀಡಿ ಕೆಲಸ ಮಾಡಿಸಿಕೊಳ್ಳಬೇಕು. ಈ ಭಾಗದ ಸಾರ್ವಜನಿಕರು ಸ್ವಚ್ಛತೆಯ ಬಗ್ಗೆ ಗಮನಹರಿಸಬೇಕು ಎಂದು ನಗರಸಭೆ ಸದಸ್ಯೆ ಕಮಲಾ ಹಾದಿಮನಿ ಹೇಳಿದರು. ಅವರು ಈಚೆಗೆ ಸ್ಥಳೀಯ 21ನೇ ವಾರ್ಡಿನ ಗಂಗಾಪುರ ಪೇಟೆಯ ಕುಂಬಾರ ಓಣಿಯ ದೊಡ್ಡ ಚರಂಡಿ ಸ್ವಚ್ಛಗೊಳಿಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು. ನಗರಸಭೆ ಪೌರಕಾರ್ಮಿಕರು ಅವಳಿ ನಗರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ನಗರಸಭೆಯ ಮೇಲ್ವಿಚಾರಕ ಮೃತ್ಯುಂಜಯ ದೊಡ್ಡಮನಿ, ದಪೇದಾರ ಹೇಮೇಶ ಯಟ್ಟಿ, ಲಕ್ಷ್ಮಣ ಚಲವಾದಿ, ಪೌರ ಕಾರ್ಮಿಕ ಸೇವೆಯನ್ನು ಪರಿಸರ ಅಭಿಯಂತರ ಆನಂದ ಬದಿ ಮೆಚ್ಚುಗೆ ವ್ಯಕ್ತಪಡಿಸಿದರು.