ಮಹಿಳೆ ಮಾನಸಿಕ ಸದೃಢತೆ ಹೊಂದಬೇಕು
ಗದಗ: ಮಹಿಳೆಯು ಮಾನಸಿಕವಾಗಿ ಸದೃಢವಾಗಿದ್ದಾಗ ಆಕೆ ಏನನ್ನಾದರೂ ಸಾಧಿಸಲು ಸಾಧ್ಯ. ಮಹಿಳೆ ಎಂದೆಂದಿಗೂ ಸಬಲೆ ಎಂದು ಶಿರಹಟ್ಟಿಯ ಸರ್ಕಾರಿ ಪಪೂ ಕಾಲೇಜಿನ ಪ್ರೊ. ಪ್ರಿಯಾಂಕ ನಡುವಿನಮನಿ ಹೇಳಿದರು. ಅವರು ಗುರುವಾರ ತಾಲೂಕು ಕಸಾಪ, ತಾಲೂಕು ಕದಳಿ ಮಹಿಳಾ ವೇದಿಕೆ ಹಾಗೂ ಗದಗ ಜಿಲ್ಲೆಯ ಪ್ರಗತಿಪರ ಮಹಿಳಾ ಸಂಘಟನೆಗಳ ಸಹಕಾರದೊಂದಿಗೆ ನಗರದ ಗಂಗಾಪುರ ಪೇಟೆಯ ದುರ್ಗಾದೇವಿ ಸಮುದಾಯ ಭವನದಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಮಹಿಳೆ ಮತ್ತು ಸಬಲೀಕರಣ ವಿಷಯವಾಗಿ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕವಿತಾ ದಂಡಿನ ಮಾತನಾಡಿದರು. ಕವಿತಾ ಕಾಶಪ್ಪನವರ, ಅಕ್ಕನ ಬಳಗದ ಅಧ್ಯಕ್ಷೆ ಕಸ್ತೂರಿ ಹಿರೇಗೌಡ್ರ ಉಪಸ್ಥಿತರಿದ್ದರು. ಸುಮಾ ಪಾಟೀಲ ಸ್ವಾಗತಿಸಿದರು. ಮಂಜರಿ ಹೊಂಬಾಳಿ ನಿರೂಪಿಸಿದರು. ಸುವರ್ಣ ವಸ್ತ್ರದ ವಂದಿಸಿದರು