ಶಾಲಾ ಸಂಸತ್ ಉದ್ಘಾಟನೆ
ಹೊಳೆಆಲೂರು: ಸ್ಥಳೀಯ ಗಾಡಗೋಳಿ ರಸ್ತೆಯಲ್ಲಿರುವ ಯಚ್ಚರೇಶ್ವರ ಬಾಲವಿಕಾಸ ವಿದ್ಯಾ ಮಂದಿರದ ಯಚ್ಚರೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಶಾಲಾ ಸಂಸತ್ ಉದ್ಘಾಟನಾ ಸಮಾರಂಭ ಗುರುವಾರ ಜರುಗಿತು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಎ.ಎನ್.ಬಡಿಗೇರ ವಹಿಸಿದ್ದರು. ಸಾನ್ನಿಧ್ಯವನ್ನು ಯಚ್ಚರಸ್ವಾಮಿಗಳು ವಹಿಸಿದ್ದರು. ಅತಿಥಿಗಳಾಗಿ ಎನ್.ಎ.ನಾಗೇಶ, ಬಸವರಾಜ ವಲ್ಯಾರ ಆಗಮಿಸಿದ್ದರು. ಹುನಗುಂಡಿ ಗ್ರಾಮ ಪಂಚಾಯಿತಿ ಸದಸ್ಯ ಗಂಗಾಧರ ಮಂಡಸೊಪ್ಪಿ ಶಾಲಾ ಸಂಸತ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಬಸವರಾಜ ವಲ್ಯಾರ ಮಾತನಾಡಿದರು. ಎಂ.ಎನ್. ಪಾಯಪ್ಪಗೌಡರ ಪ್ರಾಸ್ತಾವಿಕ ಮಾತನಾಡಿದರು. ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಸಹನಾ, ವಿದ್ಯಾ, ಪೂಜಾ, ಸಹನಾರಿಂದ ಪ್ರಾರ್ಥನೆ ಜರುಗಿತು. ಎ.ಎಂ. ಸಿಂದಗಿ ಸ್ವಾಗತಿಸಿದರು. ಎಸ್.ವಿ. ಹಳ್ಳೂರ ನಿರೂಪಿಸಿದರು. ಎಂ.ಎಸ್. ಜಂಗಣ್ಣವರ ವಂದಿಸಿದರು.