ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶಿವಸೇನೆ ದಾಂದಲೆ: ಪ್ರತಿಭಟನೆ

Rashmi Kasaragodu
Updated On : 27 Jul 2014, 12:47 pm

ಕನ್ನಡಪ್ರಭ ವಾರ್ತೆ, ಗದಗ, ಜು. 26
ಬೆಳಗಾವಿ ಜಿಲ್ಲೆಯ ಯಳ್ಳೂರಿನಲ್ಲಿ 'ಮಹಾರಾಷ್ಟ್ರ ರಾಜ್ಯ' ನಾಮಫಲಕವನ್ನು ತೆರವುಗೊಳಿಸಿದ್ದಕ್ಕೆ ಶಿವಸೇನೆಯ ಕಾರ್ಯಕರ್ತರು ರಾಜ್ಯದ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿರುವ ಕ್ರಮವನ್ನು ಖಂಡಿಸಿ ಶನಿವಾರ ನಗರದ ಗಾಂಧಿ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣಗೌಡ)ದ ಕಾರ್ಯಕರ್ತರು ಶಿವಸೇನೆ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಹನುಮಂತಪ್ಪ ಅಬ್ಬಿಗೇರಿ ಮಾತನಾಡಿ, ನಾಮಫಲಕವನ್ನು ತೆರವುಗೊಳಿಸಿರುವುದನ್ನೇ ನೆಪವನ್ನಾಗಿಟ್ಟುಕೊಂಡು ಶಿವಸೇನೆ ಪದಾಧಿಕಾರಿಗಳು ರಾಜ್ಯದ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿ ಸಾರ್ವಜನಿಕರ ಮೇಲೆ ಹಲ್ಲೆ ಮಾಡಿದ್ದಾರೆ.
ಪದೇ ಪದೆ ರಾಜ್ಯದ ಜನರ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಶಿವಸೇನೆ ಮುಖ್ಯಸ್ಥರು ಹಾಗೂ ಕಾರ್ಯಕರ್ತರನ್ನು ಕೇಂದ್ರ ಸರ್ಕಾರವು ಕೂಡಲೇ ಶಿಕ್ಷೆಗೊಳಪಡಿಸಬೇಕು. ಶಿವಸೇನೆ ನಿಷೇಧಿಸಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ನೇತೃತ್ವದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಜಯಕುಮಾರ ಬ್ಯಾಳಿ, ಸಂಘಟನಾ ಕಾರ್ಯದರ್ಶಿ ನಿಂಗನಗೌಡ ಮಾಲಿಪಾಟೀಲ, ರೋಣ ತಾಲೂಕು ಅಧ್ಯಕ್ಷ ನಿಂಗಪ್ಪ ಹೊನ್ನಾಪುರ, ಗದಗ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರಜಿಯಾ ಮುಲ್ಲಾ, ಗದಗ ನಗರ ಘಟಕದ ಅಧ್ಯಕ್ಷ ಅಜೀಂ ಖಾಜಿ, ಬೆಟಗೇರಿ ನಗರ ಘಟಕದ ಅಧ್ಯಕ್ಷ ಮೈಬು ಕುರ್ತಕೋಟಿ, ಬಸವರಾಜ ಕಾಳೆ, ಮೌಲಾಸಾಬ ಕುಂದಗೋಳ, ಗದಗ ತಾಲೂಕು ಅಧ್ಯಕ್ಷ ಶಿವಾನಂದ ಚೌಡಕಿ, ಗೌರವಾಧ್ಯಕ್ಷ ಮೋಹನ ಕಾಟವಾ, ಹನುಮಂತ ಪೂಜಾರ, ಬಸವರಾಜ ಜಿಗಳೂರ, ಮುನ್ನಾ ಪಠಾಣ, ಕೃಷ್ಣ ಲಮಾಣಿ, ಶರಣಪ್ಪ ಕಲಾದಗಿ, ಶಂಕ್ರಪ್ಪ ಸೋಮಣ್ಣನವರ, ಶೇಖಪ್ಪ ಯಳವತ್ತಿ, ಗಿರೀಶ ದೊಡ್ಡಮನಿ, ಸಂತೋಷ ವಾಲ್ಮೀಕಿ, ಧರ್ಮರಾಜ ಕನ್ಯಾಳ, ಪ್ರಕಾಶ ಕೆಂಪಣ್ಣನವರ, ಕೃಷ್ಣಪ್ಪ ಹುಡೇದ, ರಮೇಶ ಮಲ್ಲಾಪುರ, ಹನುಮಂತ ಪೂಜಾರ, ಯಲ್ಲಪ್ಪ ಅಳವಂಡಿ, ಚಂದ್ರು ಶಿಸ್ತಗಾರ, ಈರಪ್ಪ ಕಾಡರ, ಜೀವನಸಾಬ ಮುಲ್ಲಾನವರ, ಕಿರಣ, ಖಲಂದರ ಖಾಜಿ, ಸಿಕಂದರ ಲಕ್ಷ್ಮೇಶ್ವರ, ಜಾವೀದ ಖಾಜಿ, ಶ್ರೀಕಾಂತ ಅಕ್ಕಮ್ಮಣ್ಣನವರ, ಗುರುರಾಜ ಮರಾಠಿ, ಜಗದೀಶ ರಂಗಪ್ಪನವರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement