ಸಮುದಾಯ ಭವನ ಸಮರ್ಪಣೆ ಯಾವಾಗ?
ಗಜೇಂದ್ರಗಡ: ಸ್ಥಳೀಯ ಗುಡ್ಡದ ಬಳಿ ವಾಜಪೇಯಿ ಬಡಾವಣೆಯಲ್ಲಿ ಯುಐಡಿಎಸ್‌ಎಸ್‌ಎಂಟಿ ಯೋಜನೆ ಅಡಿ ಲಕ್ಷಾಂತರ ಅನುದಾನದಲ್ಲಿ ಸಮುದಾಯ ಭವನ ಕಾಮಗಾರಿ ಮುಗಿದು ಐದು ವರ್ಷವಾದರೂ ಇದುವರೆಗೂ ಸಾರ್ವಜನಿಕ ಸೇವೆಗೆ ಲಭಿಸದೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಸರ್ಕಾರ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ 2008-09ರಲ್ಲಿ ಸಮುದಾಯ ಭವನ, ಸುಲಭ ಶೌಚಾಲಯ, ದೋಬಿಘಾಟ ನಿರ್ಮಿಸಿದೆ. ಆದರೆ, ಬಡವರ ಕಲ್ಯಾಣ ಕಾರ್ಯಗಳಿಗೆ ಸಾಕ್ಷಿಕರಿಸಬೇಕಾಗಿದ್ದ ಸಮುದಾಯ ಭನವ ಹಾಳುಕೊಂಪೆಯಂತಾಗಿದೆ. ಮಾತೆತ್ತಿದರೆ ಅಭಿವೃದ್ಧಿ ಮಂತ್ರ ಜಪಿಸುವ ಸ್ಥಳೀಯ ಪುರಸಭೆ ಆಡಳಿತವಾದರೂ ಇತ್ತ ಗಮನ ಹರಿಸಿ ಸಮುದಾಯ ಭವನವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಲು ಮುಂದಾಗಬೇಕೆಂದು ವಾಜಪೇಯಿ ನಗರ ನಿವಾಸಿಗಳು ಆಗ್ರಹಿಸಿದ್ದಾರೆ.